ನ್ಯೂಸ್ ನಾಟೌಟ್: ಯುವತಿಯನ್ನು ಹಿಂಬಾಲಿ ಚುಂಬಿಸಿ ತುಟಿಗೆ ಕಚ್ಚಿದ ಕಿರಾತಕನನ್ನು ಬಂಧಿಸಲಾಗಿದೆ. ಪರಾರಿಯಾಗಿದ್ದ ಆರೋಪಿಯನ್ನು ಗೋವಿಂದಪುರ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬೆಂಗಳೂರಿನ ಗೋವಿಂದಪುರ ನಿವಾಸಿ ಮೊಹ ಮ್ಮದ್ ಮರುಫ್ ಶರೀಫ್(36 ವರ್ಷ) ಬಂಧಿತ ಆರೋಪಿ. ಈತ ಇತ್ತೀಚೆಗೆ ನಡೆದು ಹೋಗುತ್ತಿದ್ದ ಯುವತಿಯನ್ನು ಬೈಕ್ ನಲ್ಲಿ ಹಿಂಬಾಲಿಸಿ ಚುಂಬಿಸಿ ಪರಾರಿಯಾಗಿದ್ದ. ಈ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. 2 ದಿನಗಳ ಹಿಂದೆ 22 ವರ್ಷದ ಸಂತ್ರಸ್ತೆ ದಿನಸಿ ತರಲು ಅಂಗಡಿಗೆ ಹೋಗಿ, ವಾಪಸ್ ಮನೆಗೆ ನಡೆದುಕೊಂಡು ಹೋಗುತ್ತಿದ್ದಳು. ಆಗ ಬೈಕ್ ನಲ್ಲಿ ಯುವತಿಯನ್ನು ಹಿಂಬಾಲಿಸಿದ ಆರೋಪಿ ನಡುರಸ್ತೆಯಲ್ಲಿ ಆಕೆಯನ್ನು ಹಿಡಿದುಕೊಂಡು ತುಟ್ಟಿ ಚುಂಬಿಸಿ, ಕಚ್ಚಿದ್ದಾನೆ. ಅಲ್ಲದೆ, ಲೈಂಗಿಕ ಕಿರುಕುಳ ನೀಡಿದ್ದಾನೆ. ಬಳಿಕ ಆತನಿಂದ ತಪ್ಪಿಸಿಕೊಂಡು ಓಡಿದ ಯುವತಿ, ತಾಯಿಗೆ ವಿಚಾರ ತಿಳಿಸಿದ್ದಾಳೆ. ನಂತರ ತಾಯಿ ಸಲಹೆ ಮೇರೆಗೆ ಠಾಣೆಗೆ ಬಂದು ದೂರು ನೀಡಿದ್ದಳು. ಈ ಸಂಬಂಧ ಎಫ್ ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.