ಬೆಂಗಳೂರುವಿಡಿಯೋ

ಬೆಂಗಳೂರು ಟ್ರಾಫಿಕ್ ಫಜೀತಿ, ಕಾರು ಬಿಟ್ಟು ಮೆಟ್ರೋ ಹತ್ತಿದ ಮದುಮಗಳು! ವಿಡಿಯೋ ವೈರಲ್

292

ನ್ಯೂಸ್ ನಾಟೌಟ್:  ಮನೆಯಿಂದ ಮದುವೆ ಮಂಟಪಕ್ಕೆ ತೆರಳುತ್ತಿದ್ದ ವಧು ಮತ್ತು ಜೊತೆಗಿದ್ದ ಸಂಬಂಧಿಕರು ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿಕೊಳ್ಳಬೇಕಾಯಿತು. ಅಲ್ಲೇ ಕಾದರೆ ಮದುವೆ ಮುಹೂರ್ತ ಮೀರುವುದೆಂದು ಮನಗಂಡ ವಧು ಸಮಯಕ್ಕೆ ಸರಿಯಾಗಿ ಕಲ್ಯಾಣ ಮಂಟಪ ತಲುಪಲು ಕಾರು ಬಿಟ್ಟು ‘ಮೆಟ್ರೋ’ ಹತ್ತಿ ಸಾಗಿದ್ದಾಳೆ.

ಜೊತೆಗಿದ್ದ ಸಂಬಂಧಿಕರೂ ಇದಕ್ಕೆ ಸಾತ್ ನೀಡಿದ್ದಾರೆ. ಬೆಂಗಳೂರಿನ ವಧು ರೇಷ್ಮೆ ಸೀರೆ, ಚಿನ್ನಾಭರಣ ತೊಟ್ಟು, ಮೇಕಪ್‌ ಮಾಡಿಕೊಂಡು ಮನೆ ಮಂದಿಯೊಂದಿಗೆ ಕಲ್ಯಾಣ ಮಂಟಪಕ್ಕೆ ಮೆಟ್ರೋದಲ್ಲಿ ತೆರಳುವುದು ಕಂಡು ಹಲವರು ಬೆಂಗಳೂರು ಟ್ರಾಫಿಕ್ ಸಮಸ್ಯೆಯನ್ನು ದೂರಿದರೆ ಇನ್ನು ಕೆಲವರು ಮದುಮಗಳ ಬುದ್ದಿವಂತಿಕೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  

ಮೆಟ್ರೋ ದಲ್ಲಿ ವಧು ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್‌ ಆಗಿದೆ. ಆಕೆಯನ್ನು ಎಲ್ಲರೂ “ಸ್ಮಾರ್ಟ್‌ ಮದುಮಗಳು’ ಎಂದು ಕರೆದಿದ್ದಾರೆ. ಈ ವಿಡಿಯೋ 5 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

See also  ಶಾಸಕ ಮುನಿರತ್ನ ಮನೆಯಲ್ಲಿ ವಶಪಡಿಸಿಕೊಂಡ ಪೆನ್‌ ಡ್ರೈವ್‌ ನಲ್ಲಿ ಹಲವು ರಾಜಕೀಯ ನಾಯಕರ ಖಾಸಗಿ ವಿಡಿಯೋಗಳು ಪತ್ತೆ..! ಲ್ಯಾಪ್‌ಟಾಪ್‌, ಪೆನ್‌ಡ್ರೈವ್‌ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget