Latestರಾಜಕೀಯರಾಜ್ಯ

ದಾಂಪತ್ಯ ಜೀವನಕ್ಕೆ ಕಾಲಿಟ್ಟ 60ನೇ ವಯಸ್ಸಿನ  ಬಿಜೆಪಿ ಮಾಜಿ ಅಧ್ಯಕ್ಷ!ಪಕ್ಷದ ಸಹೋದ್ಯೋಗಿಯನ್ನೇ ವರಿಸಿದ ದಿಲೀಪ್!

954

ನ್ಯೂಸ್‌ ನಾಟೌಟ್:  ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ಅವರು ತಮ್ಮ 60 ವರ್ಷ ವಯಸ್ಸಿನಲ್ಲಿ ಪಕ್ಷದ ಸಹೋದ್ಯೋಗಿ ರಿಂಕು ಮಜುಂದಾರ್ ಅವರನ್ನು ಆತ್ಮೀಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.ಸಾಂಪ್ರದಾಯಿಕ ಬಂಗಾಳಿ ವಿವಾಹ ಉಡುಪನ್ನು ಧರಿಸಿದ ದಿಲೀಪ್ ಘೋಷ್ ಅವರು ತಮ್ಮ ಮನೆಯಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಕೆಲವೇ ಕೆಲವು ಆಪ್ತರನ್ನಷ್ಟೇ ಅವರು ಆಹ್ವಾನಿಸಿದ್ದು, ದಿಲೀಪ್ ಘೋಷ್ ಅವರ ತಾಯಿ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.

ದಿಲೀಪ್ ಘೋಷ್ ಯಾರು?

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು. ಸಂಘಕಾರ್ಯದ ಭಾಗವಾಗಿ ರಾಜಕೀಯಕ್ಕೆ ಬಂದವರು. ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸಿದ ಅವರು, ಮಾಜಿ ಸಂಸದರು ಕೂಡ. ಅವರಿಗೆ ರಿಂಕು ಮಜುಂದಾರ್ ಅವರು ಪಕ್ಷ ಸಂಘಟನೆ ವೇಳೆ ಪರಿಚಿತರಾಗಿದ್ದರು.

ಧನ್ಯವಾದ ಹೇಳಿದ ದಿಲೀಪ್

“ಎಲ್ಲರ ಶುಭ ಹಾರೈಕೆಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ನನಗೆ ಶುಭ ಹಾರೈಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ನಾನು ಧನ್ಯವಾದ ಹೇಳುತ್ತೇನೆ. ನನ್ನ ವೈಯಕ್ತಿಕ ಜೀವನವು ನನ್ನ ರಾಜಕೀಯ ಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು  ದಿಲೀಪ್ ಘೋಷ್ ಹೇಳಿದ್ದಾರೆ.60 ವರ್ಷದ ದಿಲೀಪ್ ಘೋಷ್, ತನ್ನ ತಾಯಿಯ ಆಸೆಯನ್ನು ಈಡೇರಿಸಲು ಮದುವೆಯಾಗಲು ನಿರ್ಧರಿಸಿದ್ದಾಗಿ ಹೇಳಿದರು.

ಇಲ್ಲಿಯವರೆಗೆ ಅವಿವಾಹಿತರಾಗಿದ್ದರೂ, ಇದು ಮಜುಂದಾರ್ ಅವರ ಎರಡನೇ ವಿವಾಹವಾಗಿದ್ದು, ಅವರಿಗೆ ಮೊದಲಿನ ವಿವಾಹದಿಂದ ಒಬ್ಬ ಮಗನಿದ್ದಾನೆ ಎಂದು ತಿಳಿದು ಬಂದಿದೆ.

See also  ಸುಳ್ಯ:ನೆಹರು ಮೆಮೋರಿಯಲ್ ಕಾಲೇಜಿನ ಎನ್ ಸಿ ಸಿ ವಿದ್ಯಾರ್ಥಿ ಭಾರತೀಯ ನೌಕಾ ಸೇನಾ ಅಕಾಡೆಮಿಗೆ ಆಯ್ಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget