ಕೊಡಗುಶಿಕ್ಷಣ

ಪರೀಕ್ಷಾ ಕೇಂದ್ರ ಸಮೀಪದಲ್ಲೇ ಫಲಾನುಭವಿಗಳ ಸಮಾವೇಶ!

ನ್ಯೂಸ್ ನಾಟೌಟ್: ರಾಜ್ಯದಲ್ಲಿ ಸಕಲ ಸಿದ್ಧತೆಯೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆಗೆ ಯಾವುದೇ ಲೋಪವಾಗದಂತೆ ಸರ್ಕಾರ ಎಚ್ಚರ ವಹಿಸಲಾಗಿತ್ತು. ಆದರೆ ನಿನ್ನೆ ಮಡಿಕೇರಿಯಲ್ಲಿ ಪರೀಕ್ಷಾ ಕೇಂದ್ರದ ಸಮೀಪದಲ್ಲೇ ನಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದ ಫಲಾನುಭವಿಗಳ ಸಮಾವೇಶದಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿರುವುದರಿಂದ ಮುಖ್ಯಮಂತ್ರಿ ತಡವಾಗಿ ಸಮಾವೇಶಕ್ಕೆ ಬರುವುದಾಗಿ ಸೂಚಿಸಿದ್ದರು. ಗಾಂಧಿ ಮೈದಾನದಲ್ಲಿ ಬೆಳಗ್ಗೆ 11.30ಕ್ಕೆ ಆರಂಭವಾಗಬೇಕಿದ್ದ ಫಲಾನುಭವಿಗಳ ಸಮಾವೇಶ ಮಧ್ಯಾಹ್ನ 3 ಗಂಟೆಗೆ ಆರಂಭಗೊಂಡರೂ ವಿದ್ಯಾರ್ಥಿಗಳಿಗೆ ತೊಂದರೆ ತಪ್ಪಿಲ್ಲ. ಪರೀಕ್ಷೆ ಬರೆಯುವ ವೇಳೆ ಸಮಾವೇಶದ ಮೈದಾನದಲ್ಲಿ ಅಳವಡಿಸಿದ್ದ ಧ್ವನಿವರ್ಧಕಗಳಿಂದ ಕಿರಿಕಿರಿ ಉಂಟಾಗಿದೆ.

ಸಮಾವೇಶಕ್ಕೆ ತೆರಳಲು 110 ಕೆ.ಎಸ್.ಆರ್.ಟಿ.ಸಿ ಬಸ್‌ಗಳನ್ನು ನಿಯೋಜಿಸಲಾಗಿತ್ತು. ಇದರಿಂದ ಬೆಳಗ್ಗೆ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ಒಂದೆರಡು ಗಂಟೆಗಳ ಕಾಲ ಬಸ್‌ಗಳಿಲ್ಲದೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಡಿಕೇರಿ, ಸುಳ್ಯ, ಪುತ್ತೂರು ಭಾಗದ ವಿದ್ಯಾರ್ಥಿಗಳಿಗೆ ಬಸ್ಸಿಲ್ಲದೆ ತೊಂದರೆ ಅನುಭವಿಸಿದ್ದಾರೆ. ಆದರೆ ಪರೀಕ್ಷಾ ಕೇಂದ್ರದ ಕಿಟಕಿಗಳನ್ನು ಮುಚ್ಚಿ ಪರೀಕ್ಷೆ ನಡೆಸಲಾಗಿತ್ತು. ಜತೆಗೆ ಸಮಾವೇಶದ ಧ್ವನಿವರ್ಧಕ ಶಬ್ದವನ್ನು ಕಡಿಮೆ ಮಾಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿಲ್ಲ ಎಂದು ಡಿಡಿಪಿಯು ಪುಟ್ಟರಾಜು ತಿಳಿಸಿದ್ದಾರೆ.

Related posts

ಮಡಿಕೇರಿ: ಆ್ಯಂಬುಲೆನ್ಸ್‌ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ..! ತಾಯಿ-ಮಗು ಆರೋಗ್ಯ..

ದೇವರಕೊಲ್ಲಿ ದೇವಸ್ಥಾನಕ್ಕೆ ಅರ್ಚಕರು ಬೇಕಾಗಿದ್ದಾರೆ

ಮಡಿಕೇರಿ: ಜಿಂಕೆ ಬೇಟೆಯಾಡಿದ ಇಬ್ಬರು ಅರೆಸ್ಟ್,ಮೂವರು ಆರೋಪಿಗಳು ನಾಪತ್ತೆ