ಕರಾವಳಿವೈರಲ್ ನ್ಯೂಸ್

ಬೆಳ್ತಂಗಡಿ: ಟ್ರೆಕ್ಕಿಂಗ್ ಹೋದ ಟೆಕ್ಕಿ ಬಂಡಾಜೆ ಕಾಡಿನೊಳಗೆ ದಿಕ್ಕು ತಪ್ಪಿ ಪರದಾಟ, ಗೆಳೆಯನಿಗೆ ಗೂಗಲ್ ಲೊಕೇಷನ್ ಹಾಕಿ ಸಹಾಯ ಯಾಚಿದ ಟೆಕ್ಕಿ , ಸತತ 10 ಗಂಟೆಗಳ ಕಾರ್ಯಾಚರಣೆ ಬಳಿಕ ಟೆಕ್ಕಿ ರಕ್ಷಣೆ..!

ನ್ಯೂಸ್ ನಾಟೌಟ್: ಟೆಕ್ಕಿಯೊಬ್ಬ ಬೆಳ್ತಂಗಡಿಯ ದಟ್ಟ ಕಾನನದ ಒಳಗೆ ಇರುವ ಬಂಡಾಜೆ ಫಾಲ್ಸ್‌ನೊಳಕ್ಕೆ ಹೋಗಿ ವಾಪಸ್‌ ಅಲ್ಲಿಂದ ಹೊರ ಬರಲಾರದೆ ವಿಲವಿಲ ಒದ್ದಾಡಿದ ಘಟನೆ ನಡೆದಿದೆ. ಕಾಡಿನೊಳಗೆ ಬಾಕಿಯಾಗಿದ್ದ ಟೆಕ್ಕಿಯನ್ನು ಸ್ಥಳೀಯರು ಹರಸಾಹಸ ಪಟ್ಟು ರಕ್ಷಿಸಿದ್ದಾರೆ.


ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ಮೂಲದ ಪಾರೇಶ್ ಕಿಶನ್ ಲಾಲ್ ಅಗರ್ವಾಲ್(25) ಎಂಬಾತ ಟ್ರಕ್ಕಿಂಗ್ ಮಾಡುವುದಕ್ಕಾಗಿ ಚಿಕ್ಕಮಗಳೂರಿಗೆ ಬಂದಿದ್ದಾನೆ. ಅಲ್ಲಿ ಮೂಡಿಗೆರೆ ತಾಲೂಕಿನ ಸುಂಕಸಾಲೆ ರಾಣಿಝರಿ ಫಾಲ್ಸ್ ಮೂಲಕ ಬಲ್ಲಾಳರಾಯನ ದುರ್ಗಾ ಕೋಟೆಯಾಗಿ ಬೆಳ್ತಂಗಡಿಯ ಬಂಡಾಜೆ ಫಾಲ್ಸ್ ಗೆ ಬಂದಿದ್ದಾನೆ. ಹಾಗೆ ಬಂದವನಿಗೆ ಇದ್ದಕ್ಕಿದ್ದಂತೆ ದಾರಿ ತಪ್ಪಿದೆ.

ದುರ್ಗಮ ಕಾಡಿನಲ್ಲಿ ಒಬ್ಬಂಟಿಯಾಗಿ ಬಂದು ಟೆಕ್ಕಿಗೆ ಕೊನೆಗೆ ದಾರಿ ತೋಚದೆ ಗೆಳೆಯನಿಗೆ ಗೂಗಲ್‌ ಲೋಕೇಷನ್ ಹಾಕಿದ್ದಾನೆ. ಗೆಳೆಯ 112 ಸಹಾಯವಾಣಿ ಹಾಗೂ ಸ್ಥಳೀಯ ತಂಡಕ್ಕೆ ಮಾಹಿತಿ ನೀಡಿ ರಕ್ಷಣೆಗೆ ಮಾನವಿ ಮಾಡಿದ್ದ. ಈ ವೇಳೆ ಟೆಕ್ಕಿ ಮೊಬೈಲ್ ನೆಟ್ ವರ್ಕ್ ಸಿಗುವ ಬಂಡಾಜೆ ಫಾಲ್ಸ್ ನ ತುದಿಯ ಕಲ್ಲಿನ ಬಂಡೆಯಲ್ಲಿ ಬೆಂಕಿ ಹಾಕಿಕೊಂಡು ರಕ್ಷಣೆ ಪಡೆದಿದ್ದ. ಭಾನುವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 3:30 ವರೆಗೆ ಕಾರ್ಯಾಚರಣೆ ನಡೆದಿತ್ತು. ಸತತ 10 ಗಂಟೆಗಳ ಕಾರ್ಯಾಚರಣೆ ಬಳಿಕ ಕಾಡಿನಿಂದ ಆತನನ್ನು ರಕ್ಷಿಸಲಾಗಿತ್ತು.
ಸದ್ಯ ಟೆಕ್ಕಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಾಳೂರು ಪೊಲೀಸ್ ಠಾಣೆಗೆ ಕರೆತರಲಾಯಿತು. ಕಾರ್ಯಾಚರಣೆಯಲ್ಲಿ ಸಿನಾನ್ ಚಾರ್ಮಾಡಿ ಮುಬಾಶೀರ್ ಚಾರ್ಮಾಡಿ,ಅಶ್ರಫ್ ಯಾನೆ ಅಶುರ್, ಸಂಶು ಕಾಜೂರ್, ನಾಸಿರ್ ಕಾಜೂರ್, ಸುದೀರ್ ವಳಂಜ್ರ , ಬೆಳ್ತಂಗಡಿ ಆಂಬುಲೆನ್ಸ್ ಚಾಲಕ ಜಲಿಲ್ ಬಾಬಾ ಬೆಳ್ತಂಗಡಿ 112 ಸಿಬ್ಬಂದಿಗಳಾದ ಶಶಿಧರ್‌ ಮತ್ತು ಅಸೀಫ್ ಪಾಲ್ಗೊಂಡಿದ್ದರು.

Related posts

ನವಿಲು ಮಾಂಸದ ರೆಸಿಪಿಯ ವಿಡಿಯೋ ಮಾಡಿದ ಯೂಟ್ಯೂಬರ್..! ಆತನನ್ನು ವಶಕ್ಕೆ ಪಡೆದು, ‘ನವಿಲು ಕರಿ’ ಮಾದರಿಯನ್ನು ವಿಧಿವಿಜ್ಞಾನ ಇಲಾಖೆಗೆ ಕಳುಹಿಸಿದ ಅಧಿಕಾರಿಗಳು..!

ಜ್ಞಾನವಾಪಿ ಮಸೀದಿ ಸ್ಥಳದಲ್ಲಿ ಸಿಕ್ಕ ಕನ್ನಡ ಶಿಲಾಶಾಸನದಲ್ಲಿ ಏನು ಬರೆದಿತ್ತು ಗೊತ್ತಾ..?ಫೋಟೋ ಬಹಿರಂಗಗೊಳಿಸಿದ ಇತಿಹಾಸ ತಜ್ಞರು

ಸುಳ್ಯ: ಅತ್ಯಾಕರ್ಷಕ ವಸ್ತ್ರಗಳ ‘ಪಾದುಕ ಡ್ರೆಸ್ ಕಲೆಕ್ಷನ್’ ಶುಭಾರಂಭ, 1 ಗ್ರಾಂ ಚಿನ್ನದ ಗ್ಯಾರಂಟಿ ಆಭರಣಗಳು ಮತ್ತು ವಾಚ್ ಗಳು ಲಭ್ಯ