ಕರಾವಳಿ

ಶಾಸಕ ಹರೀಶ್ ಪೂಂಜಾರ ವಿರುದ್ಧ ಪೇಎಂಎಲ್‌ಎ ಪೋಸ್ಟರ್‌?

468

ನ್ಯೂಸ್ ನಾಟೌಟ್ : ಎಲ್ಲಾ ಕಡೆ ಈಗ ‘ಪೇಸಿಎಂ’ ಗಲಾಟೆ ನಡೆಯುತ್ತಿದೆ. ಮತ್ತೊಂದು ಕಡೆ ಬಿಜೆಪಿ ಇದು ಕಾಂಗ್ರೆಸ್ ನ ವೋಟ್ ಬ್ಯಾಂಕ್ ಕಿತಾಪತಿ ಎಂದು ಹೇಳುತ್ತಿದೆ.

ಈ ನಡುವೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ವಿರುದ್ಧ ‘ಪೇಎಂಎಲ್‌ಎ’ ಪೋಸ್ಟರ್ ಅಂಟಿಸಲಾಗಿದೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಬೆಳ್ತಂಗಡಿಯಲ್ಲಿ ಎಲ್ಲಿಯೂ ‘ಪೇಎಂಎಲ್‌’ಗೆ ಪೋಸ್ಟರ್ ಹಾಕಲಾಗಿಲ್ಲ ಅನ್ನುವ ವಿಚಾರವನ್ನು ನ್ಯೂಸ್ ನಾಟೌಟ್ ಗೆ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಅಭಿನಂದನ್ ತಿಳಿಸಿದ್ದಾರೆ.

ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಅಭಿನಂದನ್‌, ರಾಜ್ಯಾದ್ಯಂತ ಪೇಸಿಎಂ ಪೋಸ್ಟರ್‌ ಅಂಟಿಸಲಾಗುತ್ತಿದೆ. ಅಂತೆಯೇ ಬೆಳ್ತಂಗಡಿಯಲ್ಲಿ ಪೇಸಿಎಂ ಪೋಸ್ಟರ್ ಅಳವಡಿಸಿದ್ದೇವೆ. ಆದರೆ ಹರೀಶ್ ಪೂಂಜಾ ವಿರುದ್ಧ ಪೇಎಂಎಲ್‌ಎ ಪೋಸ್ಟರ್ ಹಾಕಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೇಎಂಎಲ್‌ಎ ಪೋಸ್ಟರ್ ಹರಿದಾಡುತ್ತಿರುವುದನ್ನು ಗಮನಿಸಿದ್ದೇವೆ. ಆದರೆ ನಾವು ಆ ರೀತಿಯ ಯಾವ ಪೋಸ್ಟರ್ ಕೂಡ ಮಾಡಿ ಅಂಟಿಸಿಲ್ಲ. ಮುಂದೆ ಈ ಬಗ್ಗೆ ಯಾವ ಪ್ಲಾನ್ ಕೂಡ ಇಲ್ಲ ಎಂದು ನ್ಯೂಸ್ ನಾಟೌಟ್ ಗೆ ಸ್ಪಷ್ಟಪಡಿಸಿದರು.

See also  Udupi Toilet Case :ಉಡುಪಿ ಟಾಯ್ಲೆಟ್‌ ವಿಡಿಯೊ ಪ್ರಕರಣಕ್ಕೆ ಟ್ವಿಸ್ಟ್, ಭಯೋತ್ಪಾದನೆ,ಲವ್‌ ಜಿಹಾದ್‌ ಆಯಾಮ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget