ಕರಾವಳಿಕ್ರೈಂವೈರಲ್ ನ್ಯೂಸ್

ಬೆಳ್ತಂಗಡಿ: ಮೂರು ವರ್ಷದ ಮಗು ದುರಂತ ಅಂತ್ಯ..! ರಸ್ತೆ ಬದಿಯ ಮನೆಯಿಂದ ಹೊರ ಬಂದ ಮಗು ಮತ್ತೆ ಮನೆ ಸೇರಲೇ ಇಲ್ಲ..!

ನ್ಯೂಸ್ ನಾಟೌಟ್: ರಿಕ್ಷಾ ಢಿಕ್ಕಿ ಹೊಡೆದು ಮೂರು ವರ್ಷದ ಮಗು ಮೃತಪಟ್ಟ ಘಟನೆ ಶನಿವಾರ(ಮಾ.೧೬) ಬೆಳ್ತಂಗಡಿಯ ಸೋಣಂದೂರು ಪಣಕಜೆಯಲ್ಲಿ ನಡೆದಿದೆ. ಕೌಶಿಕ್(3 ವರ್ಷ) ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.

ಮುಂಡಾಡಿಯಲ್ಲಿ ಚಂದ್ರಶೇಖ‌ರ್ ಮನೆ ರಸ್ತೆಯ ಹತ್ತಿರವಿದ್ದು, ಮನೆಯಲ್ಲಿದ್ದ ಮಗು ಮನೆಯವರು ನೋಡದೆ ರಸ್ತೆಗೆ ಓಡಿ ಬಂದಿದೆ ಎನ್ನಲಾಗುತ್ತಿದ್ದು, ಈ ಸಂದರ್ಭ ಮಗುವಿಗೆ ರಿಕ್ಷಾ ತಾಗಿ ಗಂಭೀರ ಗಾಯಗೊಂಡಿದ್ದು, ಮಗುವನ್ನು ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದರೂ, ಯಾವುದೇ ಪ್ರಯೋಜನವಾಗದೆ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎನ್ನಲಾಗಿದೆ. ಈ ಸಂಬಂಧ ಬೆಳ್ತಂಗಡಿ ಸಂಚಾರಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಅಯ್ಯಪ್ಪ ಮಾಲಾಧಾರಿಗಳಿಗೆ ಕೋವಿಡ್‌ ಟೆಸ್ಟ್‌ ಕಡ್ಡಾಯ ಮಾಡಿದ್ರಾ..? ಆರೋಗ್ಯ ಸಚಿವ ಹೇಳಿದ್ದೇನು..?

ವಿಟ್ಲ: ದ್ವಿಚಕ್ರ ವಾಹನಕ್ಕೆ ಗುದ್ದಿ ಆಟೋ ರಿಕ್ಷಾಗೂ ಅಪ್ಪಳಿಸಿದ ರಿಕ್ಷಾ..!, ಸವಾರನಿಗೆ ಗಂಭೀರ ಗಾಯ

ಯಾವುದೇ ಜಾತಿಯವರೂ ದೇವಸ್ಥಾನದ ಅರ್ಚಕರಾಗಬಹುದು..! ಅರ್ಚಕರ ಅರ್ಹತೆ ನಿರ್ಧರಿಸಿತೇ ಹೈಕೋರ್ಟ್?