Latestಕರಾವಳಿಕ್ರೈಂ

ಬೆಳ್ತಂಗಡಿ:ವೇಶ್ಯಾವಾಟಿಕೆ ಶಂಕೆ ಮೇರೆಗೆ ಲಾಡ್ಜ್ ಗಳಿಗೆ ಪೊಲೀಸ್ ದಾಳಿ..! ಇಬ್ಬರು ಅರೆಸ್ಟ್..!

1.4k

ನ್ಯೂಸ್ ನಾಟೌಟ್: ವೇಶ್ಯಾವಾಟಿಕೆ ಚಟುವಟಿಕೆ ಶಂಕೆ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುಬ್ಬಾಪುರ್ ಮಠ್ ನೇತೃತ್ವದಲ್ಲಿ ಬೆಳ್ತಂಗಡಿ ಮತ್ತು ಉಜಿರೆಯಲ್ಲಿರುವ ಲಾಡ್ಜ್ ಗಳ ಮೇಲೆ ಜೂ‌.14 ರ ಶನಿವಾರ ರಾತ್ರಿ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.

ಈ ವೇಳೆ ಉಜಿರೆಯ ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸಲು ಯುವತಿಯನ್ನು ಕರೆತಂದಿದ್ದು ಬಯಲಾಗಿದೆ. ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದು, ಲಾಡ್ಜ್ ನ ಮ್ಯಾನೇಜರ್ ಬೆಳ್ತಂಗಡಿ ತಾಲೂಕಿನ ಸಾವ್ಯ ಗ್ರಾಮದ ಬಾರೆಗುಡ್ಡೆ ಸತೀಶ್ ಪೂಜಾರಿ (49) ಮತ್ತು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿವಾಸಿ ಯೋಗಿಶ್ ಆಚಾರ್ಯ (49) ಎಂಬವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಲಾಡ್ಜ್ ಮಾಲೀಕ ಉಜಿರೆಯ ರಮೇಶ್ ಶೆಟ್ಟಿ , ಮ್ಯಾನೇಜರ್ ಸತೀಶ್ ಪೂಜಾರಿ, ಸಿಬ್ಬಂದಿ ಯೋಗೀಶ್ ಆಚಾರ್ಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬೆಳ್ತಂಗಡಿ: ಚಲಿಸುತ್ತಿದ್ದ ಸ್ಕೂಟರ್‌ ಮೇಲೆ ಬಿದ್ದ ಮರ..! ದಂಪತಿ ಆಸ್ಪತ್ರೆಗೆ ದಾಖಲು..!

See also  ನಾಗಮಂಗಲ ಕೋಮು - ಗಲಭೆ ಪ್ರಕರಣದಲ್ಲಿ ಅಧಿಕಾರಿಗಳ ತಲೆದಂಡ..! ಪೊಲೀಸ್ ಇನ್ಸ್ ಪೆಕ್ಟರ್ ಅಮಾನತ್ತು..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget