ಕರಾವಳಿಕ್ರೈಂ

ಬೆಳ್ತಂಗಡಿ: ಮನೆ ಮೇಲೆ ಬಿದ್ದ ತೆಂಗಿನ ಮರ! ವಿಸ್ಮಯವೆಂಬಂತೆ ಪಾರಾದ ಕುಟುಂಬ!

ನ್ಯೂಸ್ ನಾಟೌಟ್ : ತೆಂಗಿನ ಮರವೊಂದು ಮನೆ ಮೇಲೆ ಬಿದ್ದು ಸಂಪೂರ್ಣ ಹಾನಿಗೀಡಾಗಿರುವ ಘಟನೆ ಬಾನುವಾರ ಬೆಳ್ತಂಗಡಿಯ ಪಡಂಗಡಿ ಗ್ರಾಮದ ಬದ್ಯಾರು ಎಂಬಲ್ಲಿ ಸಂಭವಿಸಿದೆ.

ಫೆಲಿಕ್ಸ್ ಅವರ ಪುತ್ರ ನವೀನ್ ಹಾಗೂ ಪತ್ನಿ ಮತ್ತು ಮಕ್ಕಳು ಮನೆಯಲ್ಲಿ ವಾಸವಾಗಿದ್ದು, ಪ್ರಾರ್ಥನೆ ನಿಮಿತ್ತ ಚರ್ಚಗೆ ತೆರಳಿದ್ದರಿಂದ ಭಾರೀ ಪ್ರಮಾಣದ ಜೀವಹಾನಿ ತಪ್ಪಿದೆ.

ಗಾಳಿಯ ರಭಸಕ್ಕೆ ತೆಂಗಿನ ಮರವು ಬುಡ ಸಮೇತ ಕಿತ್ತು ಮನೆಯ ಮೇಲೆ ಬಿದ್ದಿದ್ದು, ಮನೆ ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ಪಂಚಾಯತ್ ಸಿಬ್ಬಂದಿ ಭೇಟಿ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಮಳೆ ಮತ್ತು ಗಾಳಿ ಇರುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

Related posts

ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯನ ಕಿಡ್ನ್ಯಾಪ್..! ತಡರಾತ್ರಿ ಮೊಬೈಲ್‌ ನಲ್ಲಿ ಮಾತನಾಡುತ್ತ ನಿಂತಿದ್ದಾಗ ಅಪಹರಣ..!

ಅಡ್ಕಾರ್: ಬೈಕ್ ಗೆ ಹಿಂದಿನಿಂದ ಗುದ್ದಿದ ಜೀಪ್, ಸವಾರನಿಗೆ ಗಾಯ, ಆಸ್ಪತ್ರೆಗೆ ದಾಖಲು

ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಸುಳ್ಯದ ಯುವ ಅಡಿಕೆ ವ್ಯಾಪಾರಿ ಚಿಕಿತ್ಸೆ ಫಲಿಸದೆ ಸಾವು, ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರು