ಕರಾವಳಿ

ಪೆಟ್ಟು ತಡೆಯಲು ಬಂದವನಿಗೆ ಹಿಗ್ಗಾಮುಗ್ಗಾ ಥಳಿತ, ಸಾವು

608

ನ್ಯೂಸ್ ನಾಟೌಟ್: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹಲ್ಲೆ ನಡೆಯುತ್ತಿದ್ದಾಗ ಅದನ್ನು ತಪ್ಪಿಸಲು ಬಂದ ಬೆಳ್ತಂಗಡಿಯ ವ್ಯಕ್ತಿಗೆ ಯುವಕರ ತಂಡವೊಂದು ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿ ನಗರದ ಜಾರಪ್ಪ ನಾಯ್ಕ್ (೫೫) ವರ್ಷ ಎಂದು ತಿಳಿದು ಬಂದಿದೆ. ಕೆಳೆದ ಕೆಲವು ದಿನಗಳ ಹಿಂದೆ   ನಾರಾಯಣ್ ನಾಯ್ಕ್ (೪೭) ಎಂಬ ವ್ಯಕ್ತಿ ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ, ಈ ಹಿನ್ನೆಲೆಯಲ್ಲಿ ಆತನಿಗೆ ಎಚ್ಚರಿಕೆ ನೀಡಿ ಬಿಟ್ಟುಕಳಿಸಲಾಗಿತ್ತು. ಆದರೆ ಆ ವ್ಯಕ್ತಿ ಮತ್ತೆ ಅದೇ ಬಾಲಕಿಯನ್ನ ಕರೆದು ಮಾತನಾಡಿದ್ದ ಎನ್ನಲಾಗಿದೆ. ಈ ವೇಳೆ ಸ್ಥಳೀಯರ ಯುವಕರ ತಂಡ ಆತನನ್ನು ಹಿಡಿದು ಚೆನ್ನಾಗಿ ಥಳಿಸಿತು. ಈ ವೇಳೆ ಬಿಡಿಸಲು ಬಂದ ಜಾರಪ್ಪ ನಾಯ್ಕ್ ಗೂ ಹೊಡೆತ ಬಿದ್ದಿದೆ, ಇದರಿಂದ ಅವರು ನಿಧನರಾಗಿದ್ದಾರೆ ಎಂದು ಹೇಳಲಾಗಿದೆ.

See also  ಕಳಂಜ: ಅಡುಗೆ ಮಾಡುತ್ತಿದ್ದ ಮಹಿಳೆಗೆ ಬೆಂಕಿ ತಗುಲಿ ಸಾವು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget