ಕರಾವಳಿಕೊಡಗುಸುಳ್ಯ

ಬೆಳ್ತಂಗಡಿ: ಊಟ ಮಾಡಿ ರಾತ್ರಿ ಮಲಗಿದ್ದ ಪತ್ನಿ ಬೆಳಗ್ಗೆ ನಾಪತ್ತೆ, ತಾಯಿ ಜತೆ ಮಗೂ ಕೂಡ ಮಿಸ್ಸಿಂಗ್‌..!

ನ್ಯೂಸ್ ನಾಟೌಟ್ : ತಾಯಿ-ಮಗು ದಿಢೀರ್ ನಾಪತ್ತೆಯಾಗಿರುವ ಪ್ರಕರಣ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಿಂದ ವರದಿಯಾಗಿದೆ.ಗುರುವಾಯನಕೆರೆ ಪದ್ಮಯ್ಯ ಆಚಾರಿ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದ ಕಡಬ ತಾಲೂಕು ಬೆಳಂದೂರು ಗ್ರಾಮದ ಕೈಮನೆ ನಿವಾಸಿ ನವೀನ್ ಕೆ.ಆರ್. ಎಂಬವರ ಪತ್ನಿ ಕವನಾ (25ವ) ಮಗ ರಕ್ಷಣ್ (4ವ) ನಾಪತ್ತೆಯಾದವರು ಎಂದು ತಿಳಿದು ಬಂದಿದೆ.

ಇವರು ಜೂನ್ 6ರಂದು ಕಾಣೆಯಾಗಿದ್ದಾಾರೆ. ಜೂನ್ 5ರಂದು ಮನೆಯಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದು, ಜೂನ್ 6ರಂದು ಬೆಳಗ್ಗೆ ನವೀನ್ ನೋಡಿದಾಗ ಪತ್ನಿ ಹಾಗು ಮಗು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಕವನಾ ಅವರು 2022ರಲ್ಲಿಯೂ ಕಾಣೆಯಾಗಿದ್ದರು. ಪರಿಚಯಸ್ಥರೊಂದಿಗೆ ಹೋಗಿದ್ದ ಕವನಾ ಅವರನ್ನು ಪೊಲೀಸರು ಪತ್ತೆ ಮಾಡಿ ಕರೆದುಕೊಂಡು ಬಂದಿದ್ದರು.

https://www.youtube.com/watch?v=hnkiiNe0x6M&t=12s

Related posts

ನೆಟ್ ವರ್ಕ್ ಇಲ್ಲದಿರೊ ಕಡೆಯೂ ನಾವು ಲೈವ್ ಮಾಡಿದ್ವಿ..! ಆ ಜಾಗದ ದೈವ ದೇವರ ಶಕ್ತಿಯಲ್ಲದೆ ಮತ್ತೇನೂ ಅಲ್ಲ..!

ಸುಳ್ಯದಲ್ಲಿ ಹನ್ವಿಕಾ ಕ್ಯಾಂಟೀನ್ ಶುಭಾರಂಭ, ಮಾಂಸಾಹಾರಿ-ಸಸ್ಯಹಾರಿ ಹೊಸ ಕ್ಯಾಂಟೀನ್ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ

ಮೋದಿ ಜೊತೆ ಪ್ರಮಾಣವಚನ ಸ್ವೀಕರಿಸಲಿದ್ದಾರಾ ಹೆಚ್.ಡಿ ಕುಮಾರಸ್ವಾಮಿ..? ಸಂಸದ ಡಾ.ಮಂಜುನಾಥ್‌ ಈ ಬಗ್ಗೆ ಹೇಳಿದ್ದೇನು..?