ಕರಾವಳಿ

ಬೆಳ್ತಂಗಡಿ: ಕೋಳಿ ನುಂಗಿದ ಅಪರೂಪದ ಹಾವು, ಫೋಟೋ ವೈರಲ್‌

ನ್ಯೂಸ್ ನಾಟೌಟ್ : ಬೆಳ್ತಂಗಡಿ ತಾಲೂಕಿನ ಕೊಯ್ಯುರು ಗ್ರಾಮದ ಅರಂತೊಟ್ಟು ಎಂಬಲ್ಲಿ ಇದುವರೆಗೂ ಯಾರು ನೋಡದ ಅಪರೂಪದ ಸಾರಿಬಳ ಹಾವು ಪತ್ತೆಯಾಗಿದೆ. ಇದನ್ನು ಉರಗ ಪ್ರೇಮಿ ಸ್ನೇಕ್ ಅಶೋಕ್ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಅರಂತೊಟ್ಟು ನಿವಾಸಿ ದೀಪಕ್ ಎಂಬವರ ಮನೆಯಲ್ಲಿ ಸುಮಾರು ೫ ಅಡಿ ಉದ್ದದ ವಿಚಿತ್ರವಾದ ಸಾರಿಬಳ ಹಾವು ಕೋಳಿಮರಿಯನ್ನು ನುಂಗುತ್ತಿದ್ದ ವೇಳೆ ಅದನ್ನು ಕಂಡ ಮನೆಯವರು ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬಂದು ಹಾವನ್ನು ರಕ್ಷಿಸಿದ್ದಾರೆ. ಈ ಹಾವಿನ ಬಗ್ಗೆ ವಿವರಿಸಿದ ಇವರು ಫಾರೆಸ್ಟ್‌ ಬೆಕ್ಕು ಅಥವಾ ಸಾರಿಬಳ ಎಂದೇ ಕರೆಯಲ್ಪಡುವ ಈ ಹಾವು ಹೆಚ್ಚಾಗಿ ಗುಜರಾತ್ ಕೇರಳ ಮತ್ತು ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದ ಕಾಡುಗಳಲ್ಲಿ ಕಂಡುಬರುತ್ತದೆ. ಇವು ಜನವಸತಿ ಪ್ರದೇಶದಲ್ಲಿ ಕಂಡು ಬರುವುದು ತೀರಾ ವಿರಳ. ರಾತ್ರಿ ಸಮಯದಲ್ಲಿ ಸಂಚಾರ ನಡೆಸುವ ಇವುಗಳು ಪ್ರಮುಖ ಆಹಾರವಾದ ಸಣ್ಣ ಪಕ್ಷಿ, ಮೊಟ್ಟೆ, ಇಲಿ, ಬಾವಲಿ ,ತಿನ್ನುತ್ತದೆ. ಇವುಗಳಲ್ಲೂ ಎರಡು ಪ್ರಭೇದಗಳಿದ್ದು ಬೂದು ಬಣ್ಣ, ಹಾಗೂ ಕಪ್ಪು ಚುಕ್ಕೆ, ಮತ್ತು ಕಪ್ಪಚುಕ್ಕೆ ತಿಳಿಕೆಂಪು ಬಣ್ಣಗಳಿಂದ ಮೀಶ್ರಿತವಾಗಿರುತ್ತದೆ. ಇವು ವಿ‍ಷರಹಿತ ಹಾವುಗಳಾಗಿದ್ದು ತನ್ನ ೧೧ ವರ್ಷಗಳ ಹಾವು ಹಿಡಿಯುವ ಸೇವೆಯಲ್ಲಿ ಬೂದು ಮತ್ತು ತಿಳಿಕೆಂಪುಕಂಡು ಬಣ್ಣದ ಹಾವನ್ನು ಇದೇ ಮೊದಲ ಬಾರಿಗೆ ನೋಡುವುದು ಎಂದು ತಿಳಿಸಿದ್ದಾರೆ.

Related posts

ಮಂಗಳೂರು: 8 ಮಂದಿ ಸ್ನೇಹಿತರ ಜೊತೆ ಬಂದ ಯುವಕ ಸಮುದ್ರಪಾಲು..! ತನಿಖೆ ನಡೆಸುತ್ತಿರುವ ಸುರತ್ಕಲ್ ಪೊಲೀಸರು..!

ಪಶ್ಚಿಮ ಘಟ್ಟದ ಪರಿಸರ ಮತ್ತು ಪ್ರಕೃತಿ ಸಂರಕ್ಷಣೆ ಅಗತ್ಯ: ಯದುವೀರ ಒಡೆಯರ್‌

ದ.ಕ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ವಿರುದ್ಧ ದೂರು..! ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಂಡ ಆರೋಪ