ಕ್ರೈಂದಕ್ಷಿಣ ಕನ್ನಡ

ಬೆಳ್ತಂಗಡಿ: ಮೂವರು ಯುವಕರಿಂದ ಲೈಂಗಿಕ ದೌರ್ಜನ್ಯ , ಅಪ್ರಾಪ್ತ ಬಾಲಕಿ ಆರು ತಿಂಗಳ ಗರ್ಭಿಣಿ

ನ್ಯೂಸ್ ನಾಟೌಟ್: ಅಪ್ರಾಪ್ತ ಬಾಲಕಿಯನ್ನು ಬಲವಂತದಿಂದ ಲೈಂಗಿಕ ದೌರ್ಜನ್ಯಕ್ಕೊಳಪಡಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪ್ರಾಪ್ತ ಬಾಲಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಕಿ ಆರು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಾಲಕಿ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕ ಸೇರಿದಂತೆ ಒಟ್ಟು ಮೂವರು ಆರೋಪಿಗಳ ವಿರುದ್ಧ ಗ್ಯಾಂಗ್ ರೇಪ್ ಮತ್ತು ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.

ಮಹಮ್ಮದ್ ಇಕ್ಬಾಲ್ (೨೬ ವರ್ಷ), ಫಾರೂಕ್ (೧೯ ವರ್ಷ), ಹಾಗೂ ಅಪ್ರಾಪ್ತ ಬಾಲಕನನ್ನು ಪೊಲೀಸರು ಶನಿವಾರ (ಜೂ.೧) ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಬಾಲಕನನ್ನು ಮಂಗಳೂರು ಬಾಲ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Related posts

ಸಲ್ಮಾನ್ ಖಾನ್ ಆಯ್ತು ಈಗ ಶಾರುಕ್ ಖಾನ್‌ ಗೂ ಜೀವ ಬೆದರಿಕೆ ಕರೆ..!50 ಲಕ್ಷ ರೂ. ಪಾವತಿಸುವಂತೆ ಬೇಡಿಕೆ..!

“ರಜನಿಕಾಂತ್‌ ನನ್ನನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ” ಎಂದ ಈ ನಟಿ ಯಾರು?ಏನಿದು ವಿವಾದ..? ಈ ಬಗ್ಗೆ ನಟಿ ಹೇಳಿದ್ದೇನು?

ಸುಳ್ಯಕ್ಕೆ ಬರುತ್ತಿದೆ ಮತ್ತೊಂದು ಹೊಸ ಬಟ್ಟೆ ಮಳಿಗೆ..!, ಕುತೂಹಲ ಹುಟ್ಟಿಸಿದೆ ‘ರೊಮ್ಯಾಂಟಿಕ್’ ವಸ್ತ್ರ ಮಳಿಗೆ