ಕರಾವಳಿಸುಳ್ಯ

ಬೆಳ್ಳಾರೆ: ಮಹಿಳೆಗೆ ಅವಾಚ್ಯವಾಗಿ ಬೈದು, ಜಾತಿನಿಂದನೆ, ಜೀವ ಬೆದರಿಕೆ ಆರೋಪ;ಪ್ರಕರಣ ದಾಖಲು,ಮುಂದುವರಿದ ತನಿಖೆ

ನ್ಯೂಸ್ ನಾಟೌಟ್ : ಮಹಿಳೆಯೋರ್ವರಿಗೆ ಅವಾಚ್ಯಶಬ್ದಗಳಿಂದ ಬೈದಿದ್ದಲ್ಲದೇ ಜಾತಿನಿಂದನೆಯನ್ನೂ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಅನ್ನುವ ಆರೋಪವೊಂದು ಕೇಳಿ ಬಂದಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಸುಳ್ಯ ತಾಲೂಕಿನ ಮುರುಳ್ಯ ನಿವಾಸಿಯಾದ ಚೋಮಣ್ಣ ನಾಯ್ಕ ಎಂಬವರು ನೀಡಿರುವ ದೂರಿನ ಮೇರೆಗೆ ತಿಮ್ಮಪ್ಪ ಗೌಡ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.ಚೋಮಣ್ಣ ನಾಯ್ಕ ಎಂಬವರಿಗೆ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ನಿಂತಿಕಲ್ಲು ಎಂಬಲ್ಲಿ ಜಮೀನು ಇದ್ದು, ಆ ಜಮೀನಿನಲ್ಲಿ ಸಣ್ಣ ಹೊಟೇಲು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆಂದು ಹೇಳಲಾಗಿದೆ. ಇವರ ಜಮೀನಿಗೆ ಹೊಂದಿಕೊಂಡು ಇರುವ ಪಕ್ಕದ ಜಮೀನಿನಲ್ಲಿ ತಿಮ್ಮಪ್ಪ ಗೌಡ ಎಂಬುವವರ ಕಟ್ಟಡವಿದೆ.ಆ ವ್ಯಕ್ತಿ ಚೋಮಣ್ಣರವರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ಪಡೆದುಕೊಳ್ಳುವ ಇರಾದೆಯಿಂದ ಈ ಹಿಂದಿನಿಂದಲೂ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಡಿ.15 ರಂದು ತಿಮಪ್ಪ ಗೌಡ ಚೋಮಣ್ಣ ರವರ ಹೊಟೇಲ್ ಬಳಿ ಬಂದು, ಅವರ ಪತ್ನಿಯನ್ನು ಉದ್ದೇಶಿಸಿ ಜಾತಿನಿಂದನೆ ಸೇರಿದಂತೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಲ್ಲಿ ಕತ್ತಿ ಹಿಡಿದು ಜೀವ ಬೆದರಿಕೆಯನ್ನು ಒಡ್ಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೆಳ್ಳಾರೆ ಪೊಲೀಸರು ಈ ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಸೇನೆಯಿಂದ ನಿವೃತ್ತರಾದ ಭಾಸ್ಕರ ಕಾರಿಂಜ ಹುಟ್ಟೂರಿಗೆ ಆಗಮನ, ಭವ್ಯ ಸ್ವಾಗತ

ಬಿಳಿಯಾರು: ಬೈಕ್ – ಕಾರು ನಡುವೆ ಅಪಘಾತ, ಬೈಕ್ ಸವಾರನಿಗೆ ಗಾಯ

ಸುಳ್ಯದಲ್ಲಿ ಶಾಲೆ ಮಕ್ಕಳಿಗೆ ಬೌ..ಬೌ ಕಾಟ, ಬೀದಿನಾಯಿಗಳ ಹಾವಳಿಯಿಂದ ಹೈರಾಣಾಗುತ್ತಿರುವ ವಿದ್ಯಾರ್ಥಿಗಳು, ದಾರಿ ಹೋಕರು