ದಕ್ಷಿಣ ಕನ್ನಡಸುಳ್ಯ

ಬೆಳ್ಳಾರೆ: 1,300 ವರ್ಷಗಳ ಇತಿಹಾಸವಿರುವ ರಾಜರಾಜೇಶ್ವರಿ ದೇವಸ್ಥಾನದ ಕುರುಹು ಅಧ್ಯಯನಕ್ಕೆ ಸಿದ್ಧತೆ, ‘VLOG WITH ಹೇಮಂತ್ ಸಂಪಾಜೆ’ ವಿಶೇಷ ಕಾರ್ಯಕ್ರಮ ಬೆನ್ನಲ್ಲೇ ಸ್ಥಳಕ್ಕಾಗಮಿಸಿದ ಇತಿಹಾಸ ತಜ್ಞರು

225

ನ್ಯೂಸ್ ನಾಟೌಟ್: 1,300 ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿರುವ ಬೆಳ್ಳಾರೆಯ ಗೌರಿಪುರಂ ಇಲ್ಲಿನ ರಾಜರಾಜೇಶ್ವರಿ ದೇವಸ್ಥಾನದ ಕುರುಹುಗಳನ್ನು ಅಧ್ಯಯನ ನಡೆಸುವುದಕ್ಕೆ ಇತಿಹಾಸ ತಜ್ಞ, SDM ಕಾಲೇಜು ಉಜಿರೆ ಇದರ ನಿವೃತ್ತ ಉಪನ್ಯಾಸಕ ಉಮಾನಾಥ ಶೆಣೈ ಏ.9 (ಮಂಗಳವಾರ) ಬೆಳಗ್ಗೆ 9.45ಕ್ಕೆ ಆಗಮಿಸಿದ್ದಾರೆ.

ಎರಡು ದಿನಗಳ ಹಿಂದೆ ನ್ಯೂಸ್ ನಾಟೌಟ್ ಚಾನೆಲ್ ನ ‘ವ್ಲಾಗ್ ವಿತ್ ಹೇಮಂತ್ ಸಂಪಾಜೆ’ ವಿಶೇಷ ಕಾರ್ಯಕ್ರಮದಲ್ಲಿ ಈ ದೇವಸ್ಥಾನದ ಇತಿಹಾಸದ ಕುರಿತು ಬೆಳಕು ಚೆಲ್ಲಲಾಗಿತ್ತು. ಇದನ್ನು ನಮ್ಮ ಯೂಟ್ಯೂಬ್ ಚಾನೆಲ್ ಹಾಗೂ ಫೇಸ್ ಬುಕ್ ಪುಟದಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದರು. ಈ ವರದಿಯಲ್ಲಿ ಇತಿಹಾಸದ ಗರ್ಭದಲ್ಲಿ ಹುದುಗಿ ಹೋಗಿರುವ ಸತ್ಯಾಂಶದ ಸಮಗ್ರ ಚಿತ್ರಣವನ್ನು ಇತಿಹಾಸಕಾರರು ಹೊರಗೆ ತರಬೇಕು. ಮೊಘಲರ ಆಡಳಿತದಲ್ಲಿ ಹಿಂದೂ ದೇವಸ್ಥಾನವನ್ನು ಧ್ವಂಸ ಮಾಡಲಾಗಿತ್ತು. ಮಾತ್ರವಲ್ಲ ಸುತ್ತಲಿನ ವಾತಾವರಣದಲ್ಲಿ ಗೋವನ್ನು ವಧೆ ಮಾಡುವ ಮೂಲಕ ಸ್ಥಳವನ್ನು ಅಶುದ್ಧಗೊಳಿಸಲಾಗಿತ್ತು ಅನ್ನುವ ವಿಚಾರ ಕೇಳಿ ಬಂದಿತ್ತು. ಈ ಎಲ್ಲ ವಿಚಾರದ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದ ನಾವು ಇದರ ಅಧ್ಯಯನವನ್ನು ಇತಿಹಾಸ ತಜ್ಞರು ಆದಷ್ಟು ಬೇಗ ನಡೆಸಿಕೊಡಬೇಕು. ಈ ಮೂಲಕ ಸ್ಥಳೀಯರಲ್ಲಿ ಇರುವ ಹಲವು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುವಂತಾಗಬೇಕು ಎಂದು ಗೌರಿಪುರಂ ಜನರ ಪರವಾಗಿ ‘ನ್ಯೂಸ್ ನಾಟೌಟ್’ ನಲ್ಲಿ ಮನವಿ ಮಾಡಿಕೊಂಡಿದ್ದೆವು. ಈ ಬೆನ್ನಲ್ಲೇ ಉಮಾನಾಥ ಶೆಣೈ ಅವರು ಸ್ಥಳಕ್ಕೆ ಆಗಮಿಸಿರುವುದು ಇತಿಹಾಸದ ಕುರುಹುಗಳ ಅಧ್ಯಯನ ನಡೆಸುವುದಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ.

See also  ಕೊಡಗಿನ ಯುವಕ ಬೆಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget