ಕರಾವಳಿಸುಳ್ಯ

ಬೆಳ್ಳಾರೆಯ ಉದ್ಯಮಿ ನವೀನ್ ಕಾಮಧೇನು ಕಿಡ್ನಾಪ್ ಪ್ರಕರಣ:ಸ್ಪಷ್ಟನೆ ನೀಡಿದ ಆರೋಪಿ ನವೀನ್ ತಂಬಿನಮಕ್ಕಿ

481

ನ್ಯೂಸ್ ನಾಟೌಟ್ : ಬೆಳ್ಳಾರೆಯ ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಕಾಮಧೇನು ಇದರ ಮಾಲಕ , ಯುವ ಉದ್ಯಮಿ ನವೀನ್ ಎಂಬವರನ್ನು ಬಲವಂತವಾಗಿ ಆಂಬುಲೆನ್ಸ್ ನಲ್ಲಿ ಕೊಂಡೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರ ವಿರುದ್ದ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರಲ್ಲಿ ಐದನೇ ಆರೋಪಿಯಾಗಿ   ಬೆಳ್ಳಾರೆ ಸಮೀಪದ ತಂಬಿನಮಕ್ಕಿ ಮನೆ ನಿವಾಸಿ ನವೀನ್ ಕುಮಾರ್ ರೈ ಟಿ ಎಂಬವರನ್ನು ಹೆಸರಿಸಲಾಗಿದೆ. ಆದರೇ ಈ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎಂದು ನವೀನ್ ಕುಮಾರ್‌ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ನವೀನ್ ಕಾಮಧೇನು ಅವರನ್ನು ಆಂಬುಲೆನ್ಸ್ ನಲ್ಲಿ ಕೊಂಡೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ನನ್ನನ್ನು ಪ್ರಕರಣದ 5ನೇ ಆರೋಪಿಯನ್ನಾಗಿ ಮಾಡಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಈ ಘಟನೆಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಮತ್ತು ಇವರ ಯಾವುದೇ ವ್ಯವಹಾರಗಳಲ್ಲಿ ನಾನು ಭಾಗಿಯಾಗಿರುವುದಿಲ್ಲ ಎಂದಿದ್ದಾರೆ. ಈ ಘಟನೆಗೆ ಸಂಬಂಧಿಸದ ನನ್ನ ವಿರುದ್ದ  ವಿನಾಕಾರಣ  ದೂರು ನೀಡಿರುವ ನೀರಜಾಕ್ಷಿ ಅವರು ಮಾಧ್ಯಮಗಳ ಮೂಲಕ ಈ ಕುರಿತು ಸ್ಪಷ್ಟೀಕರಣ ನೀಡಬೇಕೆಂದು  ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

See also  ಗೋಳಿತೊಟ್ಟು ರಸ್ತೆಯಲ್ಲಿ ತಡರಾತ್ರಿ ಕಾಡಾನೆ ವಾಕಿಂಗ್..! ರಾತ್ರಿ ಸಂಚರಿಸುವ ನಾಗರೀಕರೇ ಎಚ್ಚರ..ಎಚ್ಚರ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget