ಕರಾವಳಿ

ಬೆಳ್ಳಾರೆಯತ್ತ ಮಸೂದ್ ಮೃತ ದೇಹ

ನ್ಯೂಸ್ ನಾಟೌಟ್ : ಬೆಳ್ಳಾರೆಯ ಕಳಂಜ ಗ್ರಾಮದಲ್ಲಿ ಕ್ಷುಲ್ಲಕ ಕಾರಣಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಮುಹಮ್ಮದ್ ಮಸೂದ್ ಮೃತ ದೇಹ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ಮುಗಿಸಿ ಇದೀಗ ಬೆಳ್ಳಾರೆ ಕಡೆಗೆ ಹೊರಟಿದೆ.

ಸುಮಾರು ತಡರಾತ್ರಿ 12.30ಕ್ಕೆ ಪಾರ್ಥೀವ ಶರೀರ ಹೊತ್ತ ವಾಹನ ಬೆಳ್ಳಾರೆ ತಲುಪುವ ನಿರೀಕ್ಷೆ ಇದೆ. ಬೆಳ್ಳಾರೆಯ ಮಸೀದಿಯಲ್ಲಿ ಅಂತಿಮ ದರ್ಶನ ವ್ಯವಸ್ಥೆ ಇದೆ. ಬಳಿಕ ಅಲ್ಲೇ ಧಪನ ಮಾಡಲಾಗುತ್ತದೆ ಎಂದು ನ್ಯೂಸ್ ನಾಟೌಟ್ ಗೆ ಮೂಲಗಳು ತಿಳಿಸಿವೆ. ಸದ್ಯ ಬೆಳ್ಳಾರೆಯಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತರ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 8 ಮಂದಿ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್ ಮತ್ತು ಭಾಸ್ಕರ್ ಬಂಧಿತರಾಗಿದ್ದಾರೆ.‌ ಬಂಧಿತ ಆರೋಪಿಗಳ ಮೇಲೆ ಪೊಲೀಸರು ಕೊಲೆ ಕೇಸು ದಾಖಲಿಸಿದ್ದಾರೆ.  

Related posts

ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಉಮಾಶ್ರೀ, ಇದು ನಟಿಯ ಮೊದಲ ವೇಷ

ಅರಂತೋಡು: ಬಿಜೆಪಿ ಭದ್ರಕೋಟೆಯೊಳಗಿರುವ ಈ ಊರಿನ ಜನರಿಗೆ 20 ವರ್ಷದಿಂದ ‘ಮಡ್ ರೋಡ್’ ಭಾಗ್ಯ..! ರೊಚ್ಚಿಗೆದ್ದ ಜನರಿಂದಲೇ ಈಗ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ

ಸೌಜನ್ಯ ಕೇಸ್ : ಮಹತ್ವದ ಹೇಳಿಕೆ ನೀಡಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ,ಏನು ಹೇಳಿದ್ದಾರೆ ?