ಕ್ರೈಂ

ಕಾಣೆಯಾಗಿದ್ದ ಬೆಳ್ಳಾರೆಯ ವಿವಾಹಿತೆ ಮೈಸೂರಿನಲ್ಲಿ ಪತ್ತೆ

918

ಬೆಳ್ಳಾರೆ : ಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ಮಂಗಳೂರಿನ ಉರ್ವ ಸ್ಟೋರ್ ನಿಂದ ನಾಪತ್ತೆಯಾಗಿದ್ದ ಬೆಳ್ಳಾರೆ ಮೂಲದ ವಿವಾಹಿತ ಮಹಿಳೆ ಪತ್ತೆಯಾದ ಬಗ್ಗೆ ವರದಿಯಾಗಿದೆ. ದಿವ್ಯಾ(29) ನಾಪತ್ತೆಯಾದವರು. ಇವರು ಶುಕ್ರವಾರ ಬೆಳ್ಳಾರೆ ಕಲ್ಮಡ್ಕದ ಮನೆಯಿಂದ ಮುಂಜಾನೆ ತನ್ನ ಅಕ್ಕ ಚೈತ್ರಾ ಅವರೊಂದಿಗೆ ಮಂಗಳೂರಿಗೆ ಬಂದಿದ್ದು ಉರ್ವ ಸ್ಟೋರ್ ಮೂಡ ಬಿಲ್ಡಿಂಗ್ ಮುಂಭಾಗ ಎಸ್.ಆರ್. ಫ್ಯಾನ್ಸಿ ಬಳಿ ಬಂದ ಬಳಿಕ ಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ತಿಳಿಸಿ ಬಳಿಕ ಬಾರದೆ, ಫೋನ್ ಕರೆಗೂ ಸಿಗದೇ ನಾಪತ್ತೆಯಾಗಿದ್ದರು.

ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ, ಎಲ್ಲಾದರೂ ಕಂಡರೆ ಮಾಹಿತಿ ನೀಡುವಂತೆ ಕೋರಿ ಮಹಿಳೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಮೊಬೈಲ್ ನಂಬರ್ ಸಹಿತ ಸಂದೇಶ ರವಾನಿಸಿ ಪತ್ತೆ ಹಚ್ಚಲು ಕೋರಿಕೊಂಡಿದ್ದರು. ಅಲ್ಲದೇ ಉರ್ವ ಪೊಲೀಸ್ ಠಾಣೆಯಲ್ಲಿ ದಿವ್ಯಾ ಅವರ ಅಕ್ಕ ಚೈತ್ರಾ ಅವರು ನೀಡಿದ ದೂರಿನಂತೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಮಹಿಳೆಯ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ದಿವ್ಯಾ ಅವರನ್ನು ಮೈಸೂರಿನಲ್ಲಿ ಮಂಗಳೂರು ಪೋಲಿಸರು ಪತ್ತೆಹಚ್ಚಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಆಕೆ ಕಾಣೆಯಾದ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

See also  ಲಕ್ಷ್ಮಿ ಹೆಬ್ಬಾಳ್ಕರ್‌ ಕಾರು ಅಪಘಾತದ ವೇಳೆ ಬೆನ್ನುಮೂಳೆ ಮುರಿತ..1 ತಿಂಗಳು ಬೆಡ್​ ರೆಸ್ಟ್ ಬೇಕೆಂದ ವೈದ್ಯರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget