ಕ್ರೈಂ

ಬೆಳ್ಳಾರೆ: ಮಸೀದಿಯಲ್ಲಿ ಎರಡೂ ತಂಡಗಳ ನಡುವೆ ಹೊಡೆದಾಟ, ಆಸ್ಪತ್ರೆಗೆ ದಾಖಲು

ಸುಳ್ಯ: ಬೆಳ್ಳಾರೆ ಮಸೀದಿಯಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದೆ. ಇತ್ತಂಡಗಳ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ. ಬೆಳ್ಳಾರೆ ಮಸೀದಿಯಲ್ಲಿ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಗೆ ಫಾರ್ಮ್ ಕೊಡುವ ವಿಷಯದಲ್ಲಿ ಆಸಿರ್, ಹಾರಿಸ್, ಹಮೀದ್, ಮುನೀರ್, ಹೈದರಾಲಿ ಮತ್ತು ಮಹಮ್ಮದ್ ಅಜರುದ್ದೀನ್, ಜಮಾಲುದ್ದೀನ್ ಕೆ.ಎಸ್, ಅಬ್ದುಲ್ ಜಮಾಲ್ ಮಧ್ಯೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಟ ನಡೆಯಿತು ಎನ್ನಲಾಗಿದೆ. ಗಾಯಗೊಂಡ ಅಜರುದ್ದೀನ್ ಪುತ್ತೂರು ಸರಕಾರಿ ಆಸ್ಪತ್ರೆ ಯಲ್ಲಿ ದಾಖಲಾಗಿದೆ. ಹೈದರಾಲಿ ಮತ್ತು ಆಸಿರ್ ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಎರಡೂ ಕಡೆಯವರು ಪೊಲೀಸು ದೂರು ನೀಡಿದ್ದು ಇತ್ತಂಡದ ಮೇಲೆ ಪ್ರಕರಣ ದಾಖಲಾಗಿದೆ.

Related posts

ಸಂಪಾಜೆ ದರೋಡೆ ಪ್ರಕರಣ: ಪೊಲೀಸರ ಜತೆ ಪ್ರಮುಖ ರೂವಾರಿಯ ಕಣ್ಣಾಮುಚ್ಚಾಲೆ ಆಟ..!

ಬೆಳ್ಳಾರೆ: ಭೀಕರವಾಗಿ ಮಹಿಳೆಯನ್ನು ಹತ್ಯೆ ಮಾಡಿದ ಆರೋಪಿಗೆ ನ್ಯಾಯಾಂಗ ಬಂಧನ, ನ್ಯಾಯಾಲಯದ ಆದೇಶ

ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಶಾಕ್‌ ಕೊಟ್ಟ ನೀಚರು..! ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೆ ಬಂದವರು ರಾಕ್ಷಸರಂತೆ ವರ್ತಿಸಿದ್ದೇಕೆ..?