ಕರಾವಳಿಸುಳ್ಯ

ನವೀನ್ ಬೆಳ್ಳಾರೆ ಕಿಡ್ನಾಪ್ ಪ್ರಕರಣ: ೬ ಮಂದಿ ಮೇಲೆ ಪ್ರಕರಣ ದಾಖಲು

307

ಸುಳ್ಯ : ಬೆಳ್ಳಾರೆಯ ಪ್ರತಿಷ್ಟಿತ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ಗೌಡ ಕಾಮಧೇನು ಎಂಬವರನ್ನು ಅಪಹರಿಸಿದ ಆರೋಪದಡಿ 6 ಜನರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆ ಮಧ್ಯಾಹ್ನ ಆಂಬ್ಯುಲೆನ್ಸ್ ಸಹಿತ ಕೆಲವು ವಾಹನಗಳಲ್ಲಿ ತಂಡವೊಂದು ಬಂದಿತ್ತು. ಈ ವೇಳೆ ಬೆಳ್ಳಾರೆ ಸಮೀಪದ ಕಾವಿನ ಮೂಲೆಯಲ್ಲಿರುವ ತನ್ನ ಮನೆಯ ಅಂಗಳದಲ್ಲಿದ್ದ ನವೀನ್ ಗೌಡ ರವರನ್ನು ಬಲವಂತವಾಗಿ ಅಂಬ್ಯುಲೆನ್ಸ್ ನಲ್ಲಿ ಹಾಕಿ ಕರೆದುಕೊಂಡು ಹೋಗಿತ್ತು. ಅಪಹರಣಕ್ಕೊಳಗಾದ ನವೀನ್ ಅವರ ತಂದೆ ಮಾಧವ ಗೌಡ, ನವಿನ್ ಅವರ ಪತ್ನಿ ಸ್ಪಂದನ ಚಿಲ್ತಡ್ಕ, ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ದಿವ್ಯ ಪ್ರಭಾ ಚಿಲ್ತಡ್ಕ (ಸ್ಪಂದನ ರವರ ತಾಯಿ), ಪರುಶುರಾಮ್, ಸ್ಪರ್ಶಿತ್ ಹಾಗೂ ನವೀನ್ ರೈ ತಂಬಿನಮಕ್ಕಿ ಪ್ರಕರಣದ ಆರೋಪಿಗಳು ಎಂದು ತಿಳಿದು ಬಂದಿದೆ.


ನವೀನ್ ಅವರ ತಾಯಿ ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೀನ್ ಕುಮಾರ್ ಹಾಗೂ ಪತ್ನಿ ಸ್ಪಂದನಳ ಮಧ್ಯೆ ಸುಮಾರು 3 ತಿಂಗಳಿನಿಂದ ವೈಮನಸ್ಸು ಉಂಟಾಗಿ ಸ್ಪಂದನಳು ತವರು ಮನೆಗೆ ಹೋಗಿದ್ದರು.ದೂರು ಸ್ವೀಕರಿಸಿದ ಪೊಲೀಸರು ೬ ಮಂದಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಪ್ರೋ.ಕೆಎಸ್ ಭಗವಾನ್ ಒಕ್ಕಲಿಗರ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಪೇಜಾವರ ಶ್ರೀ ಕಿಡಿ! ಮಹಿಷ ದಸರಾದ ಬಗ್ಗೆ ಶ್ರೀಗಳು ಹೇಳಿದ್ದೇನು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget