ಕರಾವಳಿ

ಮಕ್ಕಳ ರಸ್ತೆ ರಿಪೇರಿ ವಿಡಿಯೋ ವೈರಲ್ ಹಿನ್ನೆಲೆ: ಜಾಲತಾಣದಲ್ಲಿ ಹರಿಯಬಿಟ್ಟವರ ವಿರುದ್ಧ ಶಿಕ್ಷಣಾಧಿಕಾರಿಗಳಿಗೆ ದೂರು

ಸುಳ್ಯ : ಬೆಳ್ಳಾರೆ ಗ್ರಾಮದ ಮೂಡಾಯಿತೋಟ ಎಂಬಲ್ಲಿ ಮಕ್ಕಳಲ್ಲಿ ರಸ್ತೆ ಕೆಲಸ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ವ್ಯಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಂಬೆಡ್ಕರ್ ರಕ್ಷಣಾ ವೇದಿಕೆಯ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ.ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುವ ಚಿತ್ರವನ್ನು‌ಹರಿಯ ಬಿಟ್ಟಿರುವುದು ಇನ್ನೊಂದು ತಪ್ಪು .ತಪ್ಪಿಸ್ಥರ ವಿರುದ್ದ ವಿಚಾರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

Related posts

‘ಕಾಶ್ಮೀರ ಫೈಲ್ಸ್‌’, ‘ಕೇರಳ ಸ್ಟೋರಿ’ ಬಳಿಕ ಬರುತ್ತಿದೆ ‘ಕರಾವಳಿ ಸ್ಟೋರಿ’..! ದಕ್ಷಿಣ ಕನ್ನಡದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷದ ಕಥೆಯುಳ್ಳ ಸಿನಿಮಾ ಶೀಘ್ರ ತೆರೆಗೆ

ಮಾದಕ ದ್ರವ್ಯ ಸೇವಿಸಿ ಅಸಭ್ಯ ವರ್ತನೆ , ಆರೋಪಿ ಪೊಲೀಸ್ ಬಲೆಗೆ

ಹಲವು ತಿಂಗಳಿನಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಿನ್ನ-ಬೆಳ್ಳಿ ಹರಿಕೆ ಅಂಗಡಿ ಬಂದ್..? ಮುಚ್ಚಿದ ಬಾಗಿಲಿನ ಹಿಂದಿನ ಅಸಲಿ ಕಥೆಯೇನು..?