ಕ್ರೈಂ

ಬೆಳ್ಳಾರೆ: ಕಿಡ್ನಿಯಲ್ಲಿ ಗೆಡ್ಡೆ, ಮಗು ಸಾವು

719

ಬೆಳ್ಳಾರೆ: ಇಲ್ಲಿನ ಮೂರೂವರೆ ವರ್ಷದ ಗಂಡು ಮಗುವೊಂದು ಅನಾರೋಗ್ಯದಿಂದ ಮೃತಪಟ್ಟ ಘಟನೆ ಇತ್ತೀಚೆಗೆ ನಡೆದಿದೆ.

ಬೆಳ್ಳಾರೆಯ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಸಮೀಪದ ನಿವಾಸಿ ರಮೇಶ್ ಪೈ – ಸವಿತಾ ಪೈ ದಂಪತಿಯ ಮಗು ಹರ್ಷಿತ್ ಗೆ 6 ತಿಂಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರು. ಮಗುವನ್ನು ಪರೀಕ್ಷಿಸಿದ ವೈದ್ಯರು ಕಿಡ್ನಿಯಲ್ಲಿ ಗೆಡ್ಡೆ ಬೆಳೆದಿದೆ ಎಂದು ತಿಳಿಸಿದರು. ವೈದ್ಯರ ಸಲಹೆ ಮೇರೆಗೆ ಮಗುವನ್ನು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ಕರೆದೊಯದು ಚಿಕಿತ್ಸೆ ಕೊಡಿಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಏಪ್ರಿಲ್ 13 ರಂದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಮೃತ ಮಗು ಹರ್ಷಿತ್ ತಂದೆ-ತಾಯಿ, ಸಹೋದರಿ ರಶ್ಮಿ ಪೈಯನ್ನು ಅಗಲಿದ್ದಾರೆ.

See also  ಪ್ರಿಯಕರನೆದುರೇ ಯುವತಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕರಿಗೆ ಜೀವಾವಧಿ ಶಿಕ್ಷೆ, ಕ್ರೌರ್ಯವೆಸಗಿದವರಿಗೆ ತಕ್ಕ ಶಾಸ್ತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget