ಪುತ್ತೂರುಸುಳ್ಯ

ಹೆಣ್ಣು ಬಾಕ ಜ್ಯೋತಿಷಿ ನರಸಿಂಹ ಪಾಂಗಣ್ಣಾಯನ ಕಾಮ ಪುರಾಣ..!, ವಿವಾಹಿತ ಮಹಿಳೆಯನ್ನೂ ಬಿಡದವ ಈಗ ಪೋಕ್ಸೋ ಪ್ರಕರಣದಲ್ಲಿ ಜೈಲುಪಾಲು

ನ್ಯೂಸ್ ನಾಟೌಟ್: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಪೋಕ್ಸೋ ಪ್ರಕರಣದಲ್ಲಿ ಜ್ಯೋತಿಷಿ, ಪುರೋಹಿತ, ತಂತ್ರಿಯಾಗಿ ಖ್ಯಾತಿ ಪಡೆದಿರುವ ನರಸಿಂಹ ಪ್ರಸಾದ್ ಪಾಂಗಣ್ಣಾಯ ಜೈಲು ಸೇರಿದ್ದಾನೆ.

ಈ ಪ್ರಸಾದ್ ಪಾಂಗಣ್ಣಾಯ ಇಂತಹ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದು ಇದು ಮೊದಲೇನಲ್ಲ ಎನ್ನಲಾಗುತ್ತಿದೆ. ಈ ಹಿಂದೆ ವಿವಾಹಿತ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿ ಪತಿ-ಪತ್ನಿಯನ್ನು ದೂರ ಮಾಡಿದ ಶಾಪವೂ ಈತನ ಮೇಲಿದೆ. ಇಂತಹ ಅನೇಕ ಪ್ರಕರಣಗಳಲ್ಲಿ ಆತ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎಂದು ಇದೀಗ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಸುಳ್ಯ, ಪುತ್ತೂರು ಸೇರಿದಂತೆ ಹಲವು ಕಡೆಗಳಲ್ಲಿ ನರಸಿಂಹ ಪ್ರಸಾದ್ ಪಾಂಗಣ್ಣಾಯ ಹೋದಾಗಲೆಲ್ಲ ಮುಗ್ಧ ಹೆಣ್ಣು ಮಕ್ಕಳನ್ನು ಯಾಮಾರಿಸಿ ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದ ಎಂದು ಹೇಳಲಾಗುತ್ತಿದೆ. ಸದ್ಯ ಪೋಕ್ಸೋ ಪ್ರಕರಣದಲ್ಲಿ ಬಂಧನವಾಗಿರುವುದರಿಂದ ನರಸಿಂಹ ಪ್ರಸಾದ್ ಪಾಂಗಣ್ಣಾಯ ಸದ್ಯಕ್ಕೆ ಬಿಡುಗಡೆ ಹೊಂದುವ ಸಾಧ್ಯತೆ ಇಲ್ಲ.

Related posts

ಸೌಜನ್ಯ ಪ್ರಕರಣದ ಮರು ತನಿಖೆಗೆ ತೀವ್ರಗೊಂಡ ಒತ್ತಾಯ, ಸುಳ್ಯದಲ್ಲಿ ಗೌಡರ ಯುವ ಸೇವಾ ಸಂಘದಿಂದ ವಾಹನ ಜಾಥಾ, ತಹಶೀಲ್ದಾರ್‌ಗೆ ಮನವಿ

ಮಡಿಕೇರಿ: ಮಿತಿಮೀರಿದ ಕಾಡಾನೆ ಹಾವಳಿ, ಭಯದ ನೆರಳಲ್ಲಿ ಶಾಲಾ ಮಕ್ಕಳು, ಪೋಷಕರು..! ಶಾಲಾ ಮಕ್ಕಳನ್ನು ತಮ್ಮ ವಾಹನದಲ್ಲೇ ಮನೆಮನೆಗೆ ತಲುಪಿಸಿದ ಅರಣ್ಯ ಇಲಾಖೆ

ಅರಂತೋಡು: ಮತ್ತೊಂದು ಮರಳು ಸಾಗಾಟ ಲಾರಿ ವಶಕ್ಕೆ, ಸುಳ್ಯ ಪೊಲೀಸರ ಮಿಂಚಿನ ಕಾರ್ಯಾಚರಣೆ