ಕರಾವಳಿಸುಳ್ಯ

ಬೆಳ್ಳಾರೆ:ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜನ ಮೆಚ್ಚಿದ ‘ಈಶ’ ಬಸವ ಇನ್ನಿಲ್ಲ..!ವಿಡಿಯೋ ವೀಕ್ಷಿಸಿ…

229

ನ್ಯೂಸ್‌ ನಾಟೌಟ್‌ :ಬೆಳ್ಳಾರೆ ಜನತೆಯ ಪ್ರೀತಿಗೆ ಪಾತ್ರವಾಗಿದ್ದ ಈಶ ಬಸವ ಕೊನೆಯುಸಿರೆಳೆದಿದೆ. ಈ ಶಾಕಿಂಗ್ ನ್ಯೂಸ್ ಗುಂಗಿನಲ್ಲಿ ಇದೀಗ ಜನ ಸಿಲುಕಿಕೊಂಡಿದ್ದಾರೆ.ಭಕ್ತರ ಪ್ರೀತಿಗೆ ಪಾತ್ರನಾಗಿದ್ದ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಸವ ಇದಾಗಿದ್ದು, ಕೆಲ ದಿನಗಳಿಂದ ವಯೋ ಸಹಜ ಖಾಯಿಲೆಯಿಂದ ಅಸೌಖ್ಯಕ್ಕೊಳಗಾಗಿತ್ತು ಎಂದು ತಿಳಿದು ಬಂದಿದೆ.

ಈಶ ಬಸವನಿಗೆ ಪಶುವೈದ್ಯಾಧಿಕಾರಿಗಳು ಬಂದು ಚಿಕಿತ್ಸೆ ನೀಡಿದ್ದರು.ಆದರೂ ಚಿಕಿತ್ಸೆಗೆ ಸ್ಪಂದಿಸದೇ ಇದ್ದುದರಿಂದ ಬಾರದ ಲೋಕಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ.ಬಸವ ಈಶನಿಗೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ.

ಬೇರೆಲ್ಲ ಹೋರಿಗಳಿಗಿಂತ ವಿಭಿನ್ನವಾಗಿದ್ದ ಈಶನನ್ನು ಕಂಡಾಗಲೆಲ್ಲ ಅಲ್ಲಿಗೆ ಬರುವ ಭಕ್ತರು ತುಂಬಾ ಇಷ್ಟಪಡುತ್ತಿದ್ದರು.ಕಟ್ಟುಮಸ್ತಾಗಿದ್ದ ಈಶನ ಗಂಭೀರ ನಡಿಗೆಯೇ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ತುಂಟ ಸ್ವಭಾವ ಹೊಂದಿದ್ದ ಈಶ ಮಕ್ಕಳ ಫೇವರಿಟ್ ಕೂಡ.ಇದೀಗ ಇದರ ನಿಧನ ವಾರ್ತೆಯು ಬೆಳ್ಳಾರೆ ಜನತೆಗೆ ಅತೀವ ನೋವನ್ನುಂಟು ಮಾಡಿದೆ.

See also  ಸುಳ್ಯ: ಪ್ರೊ ಕಬಡ್ಡಿಯಲ್ಲಿ 'ತೆಲುಗು ಟೈಟಾನ್ಸ್' ಪರ ಮಿಂಚಲಿದೆ 'NMC' ಪ್ರತಿಭೆ, 'KVG ಸ್ಪೋರ್ಟ್ಸ್ ಕ್ಲಬ್'ನಿಂದ ಕ್ರೀಡಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget