ಸುಳ್ಯ

ಬೆಳ್ಳಾರೆ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

ಬೆಳ್ಳಾರೆ: ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದೇವಿ ಹೈಟ್ಸ್ ನ ಅನುಗ್ರಹ ಸಭಾಂಗಣದಲ್ಲಿ  ನಡೆಯಿತು. ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಆಸ್ಕರ್ ಆನಂದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಶುಭ ಹಾರೈಸಿದರು. ನೂತನ ಅಧ್ಯಕ್ಷರಾಗಿ ಪದ್ಮನಾಭ ಬೀಡು, ಕಾರ್ಯದರ್ಶಿ ಕೆ.ವಿನಯಕುಮಾರ್, ಸರ್ಜೆಂಟ್ ಆರ್ಮ್ ರಾಜಗೋಪಾಲ, ನಿಕಟಪೂರ್ವಾಧ್ಯಕ್ಷ ಮೋನಪ್ಪ ಗೌಡ ತಂಬಿನಮಕ್ಕಿ ಸೇರಿದಂತೆ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ಸನ್ಮಾನ, ವೃತ್ತಿ ಸೇವಾಗೌರವ,ಕೊಡುಗೆ

ಪೆರುವಾಜೆ ಡಾ.ಕೆ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿಗೆ ಹತ್ತು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಕೋವಿಡ್ ಸಂದರ್ಭ ಉತ್ತಮ ಸೇವೆ ನೀಡಿದ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದಾಧಿಕಾರಿ ಡಾ.ಆಶ್ವಥಿ ಅವರನ್ನು ರೋಟರಿ ವತಿಯಿಂದ ಸನ್ಮಾನಿಸಲಾಯಿತು. ಕೋವಿಡ್ ಸಂದರ್ಭದ ಸೇವೆಯನ್ನು ಗುರುತಿಸಿ ಬೆಳ್ಳಾರೆಯ ಆಶಾ ಕಾರ್ಯಕರ್ತೆ ಯರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿವಮೊಗ್ಗದ ಉದ್ಯಮಿ ಡಿ.ವಿ ಸತೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನೂತನ ಸದಸ್ಯರಾಗಿ ಆರೀಫ್ ಬೆಳ್ಳಾರೆ, ನಾಗೇಶ್ ಕುಲಾಲ್, ಮೆಸ್ಕಾಂ ಜೆ.ಇ ಪ್ರಸಾದ್, ಅನಿಲ್ ಬರ್ಫಾ ಸೇರ್ಪಡೆಯಾದರು. ಜಿಲ್ಲಾ ಸಹಾಯಕ ಗವರ್ನರ್ ಜಿತೇಂದ್ರನ್.ಎ, ಝೋನಲ್ ಕಾರ್ಯದರ್ಶಿ ಅಬ್ಬಾಸ್ ಕೆ ಮುರ, ಝೋನಲ್ ಲೆಫ್ಟಿನೆಂಟ್ ಭಾನುಪ್ರಕಾಶ್ ಬಿ.ಎನ್, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಕೆ.ಪ್ರಭಾಕರನ್ ನಾಯರ್ ಉಪಸ್ಥಿತರಿದ್ದರು. ಕ್ಲಬ್ ಸರ್ವಿಸ್ ಡೈರೆಕ್ಟರ್ ರವೀಂದ್ರ ಗೌಡ ವರದಿ ವಾಚಿಸಿದರು. ಪೂರ್ವಾಧ್ಯಕ್ಷ ಎ.ಕೆ ಮಣಿಯಾಣಿ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ವಿನಯಕುಮಾರ್ ಕೆ ವಂದಿಸಿದರು. ಪ್ರಭಾಕರ ಆಳ್ವ ಮತ್ತು ಉಮೇಶ್ ಮಣಿಕ್ಕಾರ ಕಾರ್ಯಕ್ರಮ ನಿರ್ವಹಿಸಿದರು.

Related posts

ಎನ್ ಎಂಸಿಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಪೇರಡ್ಕ ಎಂ.ಜೆ.ಎಂ ಹಾಗೂ ಎಸ್.ಕೆ.ಎಸ್.ಎಸ್.ಎಫ್ ನಿಂದ ಗೌರವ

ಸುಳ್ಯ :ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಮತ್ತು ನೂತನ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಓಣಂ ಆಚರಣೆ,ಗಮನ ಸೆಳೆದ ಪುಟಾಣಿ ಮಹಾಬಲಿ ಹಾಗೂ ವಾಮನ ವೇಷ