ವೈರಲ್ ನ್ಯೂಸ್

ಬೆಳಗಾವಿಯಲ್ಲಿ ನಿಗೂಢ ಎಲೆಕ್ಟ್ರಿಕ್ ಡಿವೈಸ್‌ಗಳನ್ನೊಳಗೊಂಡ ಬಲೂನ್ ಪತ್ತೆ, ಆತಂಕಗೊಂಡ ಗ್ರಾಮಸ್ಥರು!

268

ನ್ಯೂಸ್ ನಾಟೌಟ್: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕರಿವಿನಕೊಪ್ಪ ಗ್ರಾಮದ ಜಮೀನಿನಲ್ಲಿ ವಿಚಿತ್ರ ಬಲೂನ್ ಪತ್ತೆಯಾಗಿದ್ದು ಅದರಲ್ಲಿ ಕೆಲವು ಎಲೆಕ್ಟ್ರಿಕ್ ಡಿವೈಸ್‌ಗಳು ಸಿಕ್ಕಿವೆ . ಈ ನಿಗೂಢ ಬಲೂನ್ ನಿಂದಾಗಿ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ.

ಈ ದೊಡ್ಡದಾದ ಬಿಳಿ ಬಣ್ಣದ ಬಲೂನ್‌ನಲ್ಲಿ ಕೆಲ ಎಲೆಕ್ಟ್ರಾನಿಕ್ ವಸ್ತುಗಳು, ಬ್ಯಾಟರಿ ಪತ್ತೆಯಾಗಿದ್ದು, ಹೆಚ್ಚಿನ ಪರಿಶೀಲನೆಗೆ ಬೆಳಗಾವಿಗೆ ತರಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಲವೇ ಕ್ಷಣಗಳಲ್ಲಿ ನೀಡುವುದಾಗಿ ಎಸ್ ಪಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.

ಚೀನ, ಯುಎಸ್ ಎ ಹಾಗೂ ಜರ್ಮನಿಯಲ್ಲಿ ಕಂಡು ಬರುವ ಬಲೂನ್ ನಂತೆ ಇದು ಕಂಡು ಬರುತ್ತಿದ್ದು, ಹೆಚ್ಚಿನ‌ ಮಾಹಿತಿ ಸಿಗಬೇಕಾಗಿದೆ. ಬೆಳಗಾವಿ ಜಿಲ್ಲೆಯ ಗದ್ದಿಕರವಿನಕೊಪ್ಪದಲ್ಲಿ ಕಂಡುಬಂದ ಬಲೂನಿನ ಬಗ್ಗೆ ಪ್ರಾಥಮಿಕ ತನಿಖೆ ಮಾಡಲಾಗಿದ್ದು ಇದು ಅತೀ ಎತ್ತರದ ಪ್ರದೇಶದಲ್ಲಿ ಹವಾಮಾನ ನಿರ್ಧರಿಸಲು ಬಳಸುವ ಸಾಧನವಾಗಿದೆ. ಹೀಗಾಗಿ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಹೇಳಿದ್ದಾರೆ.

ಗದ್ದಿಕರವಿನಕೊಪ್ಪ ಗ್ರಾಮದ ಹೊಲದಲ್ಲಿ ಪತ್ತೆಯಾದ ಬಲೂನನ್ನು ವಶಪಡಿಸಿಕೊಳ್ಳಲಾಗಿದ್ದು ಇದರ ಮೂಲವನ್ನು ಸಹ ಪತ್ತೆಹಚ್ಚಲಾಗಿದೆ. ಸಂಪೂರ್ಣ ತನಿಖೆಯ ನಂತರ ಮಾಹಿತಿ ನೀಡಲಾಗುವುದು ಎಂದರು. ಇದು ಎತ್ತರದ ತಾಪಮಾನದ, ಗಾಳಿಯ ವೇಗ ಹಾಗೂ ಗಾಳಿಯ ಒತ್ತಡದ ಮೇಲ್ವಿಚಾರಣೆ ಮಾಡಲು ಬಳಸುವ ಸಾಧನವಾಗಿದೆ ಎಂದು ಜಿಲ್ಲಾ ಎಸ್. ಪಿ. ತಿಳಿಸಿದ್ದಾರೆ.

See also  ರಂಭಾಪುರಿ ಶ್ರೀ ಕಾರಿನ ಮೇಲೆ ಚಪ್ಪಲಿ ಎಸೆದ ಮಹಿಳೆ..! ಏನಿದು ಭಕ್ತರು ಹಾಗೂ ಸ್ವಾಮೀಜಿ ನಡುವಿನ ವಿವಾದ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget