ಕ್ರೈಂದೇಶ-ವಿದೇಶಬೆಂಗಳೂರುವೈರಲ್ ನ್ಯೂಸ್ಸಿನಿಮಾ

ಬೆಳಗಾವಿಯ ಹಿಂಡಲಗಾ ಜೈಲಿಗೆ ದರ್ಶನ್ ಶಿಫ್ಟ್..? ಜೈಲುಗಳ ಭದ್ರತಾ ಮಾಹಿತಿ ಸಂಗ್ರಹಿಸುತ್ತಿರುವ ಕಾರಾಗೃಹ ಡಿಜಿಪಿ..!

230

ನ್ಯೂಸ್ ನಾಟೌಟ್: ಬೆಂಗಳೂರಿನ ಪರಪ್ಪನ ಆಗ್ರಹಾರದಲ್ಲಿರುವ ದರ್ಶನ್ ನನ್ನು ಸಿಎಂ ಸಿದ್ದರಾಮಯ್ಯ ಬೇರೆ ಜೈಲಿಗೆ ಕಳುಹಿಸಲು ಸೂಚನೆ ನೀಡಿದ ಬೆನ್ನಲ್ಲೇ ಬೆಳಗಾವಿಯ ಹಿಂಡಲಗಾ ಜೈಲಿಗೆ (Hindalga Jail) ದರ್ಶನ್ ಸ್ಥಳಾಂತರವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಈಗಾಗಲೇ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ, ದಂಡುಪಾಳ್ಯ ಗ್ಯಾಂಗ್, ವೀರಪ್ಪನ್ ಸಹಚರರು, ಸೈನೈಡ್ ಮಲ್ಲಿಕಾ, ಬಳ್ಳಾರಿ ನಾಗಾ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ ಹಲವರು ಸೆರೆವಾಸ ಅನುಭವಿಸಿದ್ದಾರೆ. ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿಗಳು ಕೂಡ ಹಿಂಡಲಗಾ ಜೈಲಿನಲ್ಲಿದ್ದರು.

ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಪ್ರಮುಖ ಜೈಲುಗಳ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಬೆಳಗಾವಿಯ ಹಿಂಡಲಗಾ ಜೈಲಿನ ಬಂದೋಬಸ್ತ್ ವ್ಯವಸ್ಥೆ ಮತ್ತು ದರ್ಶನ್ ಅಥವಾ ಆತನ ಗ್ಯಾಂಗ್ ಶಿಫ್ಟ್ ಮಾಡಿದರೆ ಆಗುವ ಸಾಧಕ ಬಾಧಕಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ ಎಂದು ವರದಿ ತಿಳಿಸಿದೆ.

Click

https://newsnotout.com/2024/08/kasaragodu-govt-kananda-news-engineer-viral-news/
https://newsnotout.com/2024/08/facebook-post-kannada-news-bangladesh-video-kannada-news-agent/
https://newsnotout.com/2024/08/mysore-note-print-office-kannada-news-employement/
See also  ಕೇಜ್ರಿವಾಲ್‌ ಬಂಧನ ಪ್ರಕರಣ: ಕುತೂಹಲ ಮೂಡಿಸಿದ ಅಮೆರಿಕಾ, ಜರ್ಮನಿ ಮತ್ತು ವಿಶ್ವ ಸಂಸ್ಥೆಯ ಪ್ರತಿಕ್ರಿಯೆ..! ವಿಶ್ವ ಸಂಸ್ಥೆ ವಕ್ತಾರ ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget