Uncategorized

ಭಿಕ್ಷೆ ನೀಡುವವರ ವಿರುದ್ಧ ಎಫ್‌.ಐ.ಆರ್ ದಾಖಲಿಸುವುದಾಗಿ ತಿಳಿಸಿದ ಜಿಲ್ಲಾಧಿಕಾರಿ..!ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ..!

ನ್ಯೂಸ್ ನಾಟೌಟ್ :ಇಂದೋರ್ ನಗರವನ್ನು ಭಿಕ್ಷುಕರಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಇದರ ಅನ್ವಯ ಭಿಕ್ಷೆ ನೀಡುವವರ ವಿರುದ್ಧ 2025ರ ಜನವರಿ 1ರಿಂದ ಎಫ್‌ ಐ ಆರ್ ದಾಖಲಿಸಲಾಗುವುದು ಎಂದು ಜಿಲ್ಲಾ ಅಧಿಕಾರಿ ಆಶಿಶ್ ಸಿಂಗ್ ಸೋಮವಾರ(ಡಿ.16) ತಿಳಿಸಿದ್ದಾರೆ.

“ಜನರನ್ನು ಭಿಕ್ಷೆ ಬೇಡುವಂತೆ ಪ್ರೇರೇಪಿಸುತ್ತಿದ್ದ ವಿವಿಧ ಗ್ಯಾಂಗ್‌ ಗಳನ್ನು ಪತ್ತೆಹಚ್ಚಲಾಗಿದೆ. ಅಲ್ಲದೇ ಭಿಕ್ಷಾಟನೆಯಲ್ಲಿ ತೊಡಗಿರುವ ಅನೇಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಭಿಕ್ಷೆ ನೀಡುವ ಮೂಲಕ ಪಾಪದಲ್ಲಿ ಪಾಲುದಾರರಾಗಬೇಡಿ ಎಂದು ಇಂದೋರ್‌ ನ ಎಲ್ಲಾ ನಿವಾಸಿಗಳಿಗೆ ನಾನು ಮನವಿ ಮಾಡುತ್ತೇನೆ” ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಾತು ಮುಂದುವರಿಸಿದ ಡಿಸಿ, “ಇಂದೋರ್‌ ನಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ಭಿಕ್ಷಾಟನೆ ವಿರುದ್ಧ ನಮ್ಮ ಜಾಗೃತಿ ಅಭಿಯಾನ ಈ ತಿಂಗಳ (ಡಿಸೆಂಬರ್) ಅಂತ್ಯದವರೆಗೆ ನಡೆಯಲಿದೆ. ಜನವರಿ 1 ರಿಂದ ಯಾವುದೇ ವ್ಯಕ್ತಿ ಭಿಕ್ಷೆ ನೀಡುತ್ತಿರುವುದು ಕಂಡುಬಂದರೆ, ಅವರ ವಿರುದ್ಧ ಎಫ್‌ ಐ ಆರ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Click

https://newsnotout.com/2024/12/tirupathi-darshana-pass-kannada-news-viral-news-d-karnataka/
https://newsnotout.com/2024/12/man-found-dead-in-nettana-from-rail-kannada-news/

Related posts

ಭಾರತೀಯ ಸೇನೆಯಲ್ಲಿ ಕೇವಲ 4 ವರ್ಷದ ಮಿಲಿಟರಿ ನೇಮಕಾತಿ, ಏನಿದು ಅಗ್ನಿಪಥ್ ..?

ಶ್ರೀ ಕೃಷ್ಣನ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ : ಸಿಎಂ ಬಸವರಾಜ್ ಬೊಮ್ಮಾಯಿ

ವಾಟ್ಸಅಪ್ ನಲ್ಲೇ ನ್ಯಾಯಾಧೀಶರಿಂದ ತುರ್ತು ವಿಚಾರಣೆ