ನ್ಯೂಸ್ ನಾಟೌಟ್: ವಿದ್ಯಾರ್ಥಿಗಳು ಕಾಲೇಜು ತರಗತಿಯಲ್ಲೇ ಬಿಯರ್ ಬಾಟಲ್ ಕೈಯಲ್ಲಿ ಹಿಡಿದು ಬರ್ತ್‌ಡೇ ಪಾರ್ಟಿ ಮಾಡಿದ್ದಾರೆ. ಒಂದಷ್ಟು ಕಾಲೇಜು ವಿದ್ಯಾರ್ಥಿಗಳು ತರಗತಿಯಲ್ಲಿ ಶಿಕ್ಷಕಿಯ ಸಮ್ಮುಖದಲ್ಲಿಯೇ ಕೈಯಲ್ಲಿ ಬಿಯರ್ ಬಾಟಲ್ ಹಿಡಿದು, ಕೇಕ್ ಕಟ್ ಮಾಡಿ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ಕುರಿತ ವಿಡಿಯೋವೊಂದು ವೈರಲ್ ಆಗಿದ್ದು, ವಿದ್ಯಾರ್ಥಿಗಳ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.
टेबल पर रखा हुआ केक और हाथ में बीयर की बोतल, और साथ में हैप्पी बर्थडे का शोर..यह घटना किसी फाइव स्टार होटल या रिजॉर्ट की नहीं है बल्कि शिक्षा के मंदिर की है. यह वीडियो मध्य प्रदेश के मऊगंज जिले के शासकीय हनुमना महाविद्यालय से सामने आया है जहां शिक्षा के मंदिर में जाम छलकाए जा रहे… pic.twitter.com/aSob42GdKu
— NDTV India (@ndtvindia) February 12, 2025
ಈ ಘಟನೆ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೈಯಲ್ಲಿ ಬಿಯರ್ ಬಾಟಲ್ ಹಿಡಿದು, ಕೇಕ್ ಕಟ್ ಮಾಡಿ ಬರ್ತ್ ಡೇ ಪಾರ್ಟಿ ಮಾಡಿದ್ದಾರೆ. ಶಿಕ್ಷಕಿಯ ಸಮ್ಮುಖದಲ್ಲಿಯೇ ತರಗತಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಬರ್ತ್ ಡೇ ಪಾರ್ಟಿ ಮಾಡಿದ್ದು, ಈ ಘಟನೆ ಇದೀಗ ತೀವ್ರ ಟೀಕೆಗೆ ಗುರಿಯಾಗಿದೆ.