ದೇಶ-ವಿದೇಶವೈರಲ್ ನ್ಯೂಸ್

ಬಿಯರ್‌ ಗಾಗಿ 3 ತಿಂಗಳ ಮಗುವನ್ನೇ ಮಾರಿದ ತಂದೆ-ತಾಯಿ..! ಮಗುವನ್ನು ರಕ್ಷಿಸಿದ ಪೊಲೀಸರು..!

236

ನ್ಯೂಸ್ ನಾಟೌಟ್: ಬಿಯರ್‌ಗಾಗಿ ದಂಪತಿ ತಮ್ಮ 3 ತಿಂಗಳ ಹಸುಗೂಸನ್ನೇ ಮಾರಾಟ ಮಾಡಿರುವ ಘಟನೆ ಅಮೆರಿಕದ ವಾಷಿಂಗ್ಟನ್ ​​​ನಲ್ಲಿ ನಡೆದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ರೋಜರ್ಸ್‌ನ ಕ್ಯಾಂಪ್‌ಗ್ರೌಂಡ್​​ಗೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಪೋಷಕರಾದ ಡೇರಿಯನ್ ಅರ್ಬನ್ ಮತ್ತು ಶಲೇನ್ ಎಹ್ಲರ್ ಎಂಬವರನ್ನು ಅರೆಸ್ಟ್ ಮಾಡಲಾಗಿದೆ.

ಸೆಪ್ಟೆಂಬರ್ 21 ರಂದು ಹಸುಗೂಸನ್ನು ಸುಮಾರು 83 ಸಾವಿರ ರೂ. ನಗದು ಹಣ ಮತ್ತು ಬಿಯರ್ ಗೆ ಮಾರಾಟ ಮಾಡಿದ್ದರು. ಈ ಬಗ್ಗೆ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು,ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ. ಆದರೆ ಅದಾಗಲೇ ಮಗುವಿನ ಪೋಷಕರು ಅಲ್ಲಿಂದ ಪರಾರಿಯಾಗಿದ್ದಾರೆ.

ಈ ದಂಪತಿ ಸಾವಿರ ಡಾಲರ್‌ ಗಳಿಗೆ ಮಾರಾಟ ಮಾಡಲು ಒಪ್ಪಿದ ಪತ್ರ ವಾಸಿಸುತ್ತಿದ್ದ ಟೆಂಟ್‌ನಲ್ಲಿ ಪತ್ತೆಯಾಗಿವೆ. ಇದರಲ್ಲಿ ನಗದು ಜೊತೆಗೆ ಬಿಯರ್ ನೀಡಲು ಒಪ್ಪಂದ ಮಾಡಿಕೊಂಡಿರುವುದನ್ನು ಕಂಡು ಪೊಲೀಸರು ದಂಗಾಗಿ ಹೋಗಿದ್ದಾರೆ. ಇಬ್ಬರೂ ಪೋಷಕರು ಪತ್ರಕ್ಕೆ ಸಹಿ ಹಾಕಿರುವ ಸೆಲ್‌ಫೋನ್ ವಿಡಿಯೋವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Click

https://newsnotout.com/2024/10/babies-nomore-kananda-news-children-k-viral-issue/
https://newsnotout.com/2024/10/fire-on-self-govinda-actor-of-bollywwod-kannada-news-gun/
https://newsnotout.com/2024/10/super-star-rajanikanth-kannada-news-hospitalized-76-year-old/
https://newsnotout.com/2024/10/uppinangady-fake-call-as-cbi-officer-kannada-news/
See also  ಹೆರಿಗೆ ರಜೆ ಮುಗಿಸಿ ಬಂದ ಆಕೆ ಮತ್ತೆ ಗರ್ಭಿಣಿ..! ಕೆಲಸದಿಂದ ವಜಾಗೊಳಿಸಿದ ಕಂಪನಿಗೆ ಕೋರ್ಟ್ ನಿಂದ ದಂಡ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget