ರಾಜ್ಯವೈರಲ್ ನ್ಯೂಸ್

34 ವರ್ಷಗಳ ಹಿಂದೆ 1 ಬಿಯರ್​ ಬಾಟಲ್​ ಬೆಲೆ ಎಷ್ಟಿತ್ತು ಗೊತ್ತಾ..? 1989 ರಲ್ಲಿ ಬಿಯರ್ ಖರೀದಿಸಿದ ಬಿಲ್ ವೈರಲ್..!

237

ನ್ಯೂಸ್ ನಾಟೌಟ್: ನಮ್ಮ ಕಾಲದಲ್ಲಿ 1 ರೂಪಾಯಿ ಕೊಟ್ಟರೆ ಏನೆಲ್ಲಾ ಬರ್ತಿತ್ತು ಗೊತ್ತಾ? ಆದರೆ, ಈ ಕಾಲದಲ್ಲಿ 100 ರೂಪಾಯಿಗೂ ಬೆಲೆಯಿಲ್ಲ ಎಂದು ಹಿರಿಯರು ಆಡುವ ಮಾತಗಳನ್ನು ಆಗಾಗ ನೀವು ಕೇಳಿರುತ್ತಿರಿ. ಏಕೆಂದರೆ, ಇಂದು ಎಲ್ಲ ವಸ್ತುಗಳ ಬೆಲೆ ದುಬಾರಿಯಾಗಿದೆ ಜೊತೆಗೆ ರೂಪಾಯಿಯ ಮೌಲ್ಯವು ಡಾಲರ್ ಮುಂದೆ ಇಳಿದಿದೆ. 1989ನೇ ಇಸವಿಗೆ ಸಂಬಂಧಿಸಿದ ಬಿಲ್ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಸಾಮಾಜಿಕ ಜಾಲತಾಣ ಬಳಕೆದಾರರು 30 ವರ್ಷ ಹಳೆಯದಾದ ಬಿಯರ್ ಬಿಲ್ ಅನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದರೆ ಒಂದು ಕ್ಷಣ ನಿಮ್ಮ ಕಣ್ಣುಗಳನ್ನು ನೀವೇ ನಂಬುವುದಿಲ್ಲ. ಏಕೆಂದರೆ, 30 ವರ್ಷಗಳ ಹಿಂದೆ ಬಿಯರ್ ಎಷ್ಟು ಅಗ್ಗವಾಗಿತ್ತು ಎಂದರೆ ಇಂದು ಸಪ್ಲೈಯರ್​ಗೂ ಅದಕ್ಕಿಂತಲೂ ಹೆಚ್ಚಿನ ಟಿಪ್ಸ್ ನೀಡಲಾಗುತ್ತದೆ. ಬಾರ್‌ಗಳು ಮತ್ತು ರೆಸ್ಟೋರೆಂಟ್​ಗಳಲ್ಲಿ ಮದ್ಯಪಾನ ಸಪ್ಲೈ ಮಾಡುವ ವೇಟರ್‌ಗಳಿಗೆ ಟಿಪ್ಸ್​ ಅಂತಾನೇ 100 ರೂ. ನೀಡುತ್ತಾರೆ. 1989ನೇ ಇಸವಿಯ ಬಗ್ಗೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬಿಯರ್ ಬಿಲ್​ನಲ್ಲಿ ದಾಖಲಾಗಿರುವ ಒಂದು ಬಿಯರ್​ ಬಾಟಲಿಯ ಬೆಲೆ ಕೇವಲ 33 ರೂಪಾಯಿಯಾಗಿತ್ತು. ಅಂದಿನ ಬೆಲೆಗೂ ಇಂದಿನ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದೆ. ಇಂದು ಕಡಿಮೆ ಬೆಲೆಯ ಬಿಯರ್ 100 ರಿಂದ 120 ರೂ.ವರೆಗೂ ದೊರೆಯುತ್ತದೆ.

See also  ಮಧ್ಯಾಹ್ನ ಗರ್ಭಿಣಿ ಮಹಿಳೆ ಮತ್ತು ಆಕೆಯ ಪತಿಯನ್ನು ಠಾಣೆಗೆ ಕರೆತಂದ ಪೊಲೀಸರು ರಾತ್ರಿ 10 ಗಂಟೆವರೆಗೆ ಠಾಣೆಯಲ್ಲಿಯೇ ಇರಿಸಿಕೊಂಡಿದ್ದರು..? ತನಿಖೆಗೆ ಆದೇಶ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget