ನ್ಯೂಸ್ ನಾಟೌಟ್: ದೇಶದಲ್ಲಿ ಬೀಡಿ , ಸಿಗರೇಟ್ ಮಾರಾಟವನ್ನು ನಿಷೇಧಿಸಲು ಕೇಂದ್ರ ಸರಕಾರದ ಸಂಸತ್ತಿನ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ. ಸಿಗರೇಟ್ ಮಾರಾಟವು ತಂಬಾಕು ನಿಯಂತ್ರಣ ಅಭಿಯಾನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಂಸತ್ತಿನ ಸ್ಥಾಯಿ ಸಮಿತಿ ವಾದಿಸಿದೆ.
ಬೀಡಿ ಹಾಗೂ ಸಿಗರೇಟ್ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವುದರಿಂದ ಕಡಿಮೆ ಆದಾಯ ಹೊಂದಿದ ಜನರಿಗೆ ಹಾಗೂ ಯುವಕರಿಗೆ ಇವುಗಳನ್ನು ಸುಲಭವಾಗಿ ಖರೀದಿಸಲು ಸಾಧ್ಯವಾಗುತ್ತದೆ. ದೇಶದಲ್ಲಿ ಬಹುತೇಕ ಯುವಕರು ಧೂಮಪಾನದ ಚಟಕ್ಕೆ ಸಿಲುಕಿ ಗಂಭೀರ ಅನಾರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ. ಇದನ್ನು ತಪ್ಪಿಸಲು ಬೀಡಿ , ಸಿಗರೇಟ್ ನಿಷೇಧಕ್ಕಾಗಿ ಕೇಂದ್ರ ಸರಕಾರ ಮುಂದಾಗಿದೆ.