ನ್ಯೂಸ್ ನಾಟೌಟ್: ಈಗ ಸಾಮಾಜಿಕ ಜಾಲ ತಾಣವನ್ನು ಓಪನ್ ಮಾಡಿದ್ರೆ ಸಾಕು, ಎಲ್ಲಿ ನೋಡಿದ್ರೂ ಎಐ ಘಿಬ್ಲಿ (Ai Ghibli) ಯದ್ದೇ ಕಾರುಬಾರು. ಕಾರ್ಟೂನ್ ಇಮೇಜ್ ಗಳಿಗೆ ಜನ ಮರುಳಾಗಿದ್ದಾರೆ.ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ಘಿಬ್ಲಿ ದೊಡ್ಡ ಗಲಿಬಿಲಿಯನ್ನೇ ಮಾಡಿಬಿಟ್ಟಿದೆ. ವಾಟ್ಸ್ಯಾಪ್, ಇನ್‌ಸ್ಟಾಗ್ರಾಮ್, ಫೇಸ್ ಬುಕ್ ಎಲ್ಲಿ ನೋಡಿದ್ರೂ ಘಿಬ್ಲಿ ಆರ್ಟ್ ಗಳೇ ರಾರಾಜಿಸುತ್ತಿವೆ. ಇದೀಗ ಘಿಬ್ಲಿ ಆರ್ಟ್ ವೈರಲ್ ಆಗುತ್ತಿದ್ದಂತೆ ಖಾಕಿ ಅಲರ್ಟ್ ಆಗಿದೆ. ಎಐ ಬಳಸಿಕೊಂಡು ಘಿಬ್ಲಿ ಆರ್ಟ್ ಮಾಡೋರಿಗೆ ಪೊಲೀಸರು ಇದೀಗ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಖಾಕಿ ವಾರ್ನಿಂಗ್!
ಘಿಬ್ಲಿ ಟ್ರೆಂಡ್ ಹೆಚ್ಚಾಗುತ್ತಿದ್ದಂತೆ ಇತ್ತೀಚೆಗಷ್ಟೇ ಸೈಬರ್ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಇದೀಗ ಈ ಬೆನ್ನಲ್ಲೇ ಪೊಲೀಸರೂ ಕೂಡಾ ಸಾರ್ವಜನಿಕರಿಗೆ ಎಚ್ಚರಿಗೆ ನೀಡಿದ್ದಾರೆ. AI ನಲ್ಲಿ ರಚಿಸಿದ ಘಿಬ್ಲಿ ಟ್ರೆಂಡ್ ನೋಡಲು ಚಂದ ಆದ್ರೇ ಎಲ್ಲಾ AI ಆಪ್ ಗಳು ಗೌಪ್ಯತೆಯನ್ನು ರಕ್ಷಿಸಲ್ಲ. ವೈಯಕ್ತಿಕ ಫೋಟೋಗಳನ್ನು ಅಪ್ಲೋಡ್ ಮಾಡುವ ಮೊದಲು ಯೋಚಿಸಿ ಅಂತಾ ಪೊಲೀಸರು ಬಳಕೆದಾರರಿಗೆ ಸಂದೇಶ ನೀಡಿದ್ದಾರೆ. ವಿಶ್ವಾಸಾರ್ಹ AI ಅಪ್ಲಿಕೇಶನ್ ಮಾತ್ರ ಬಳಸಿ ಅಂತಾ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ಈ ಘಿಬ್ಲಿ- ಸ್ಟುಡಿಯೋ ಸ್ಟೈಲ್ ಡಿಸೈನ್ ವೈರಲ್ ಆಗಿದೆ. ಹೀಗಾಗಿ ಎಲ್ಲರೂ ಟ್ರೆಂಡ್ ಸೆಟ್ ಮಾಡಲು ತಮ್ಮ ತಮ್ಮ ವೈಯಕ್ತಿಕ ಫೋಟೋಗಳನ್ನು ಹಾಕಿ ಜನರೇಟ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಬಳಕೆದಾರರು ತಿಳಿಯದೆಯೇ OpenAI ಗೆ ಫೇಸ್ ಡೇಟಾವನ್ನು ನೀಡುತ್ತಿದ್ದಾರೆ ಎಂದು ವಿಮರ್ಶಕರು ಹೇಳಿದ್ದಾರೆ. ಇದು ಅವರ ಗೌಪ್ಯತೆಯನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.