ಕರಾವಳಿಕ್ರೈಂವೈರಲ್ ನ್ಯೂಸ್

ಮಂಗಳೂರು: ಬಸ್ ನಿಂದ ಹೊರಕ್ಕೆಸೆಯಲ್ಪಟ್ಟ ವಿದ್ಯಾರ್ಥಿನಿ..! ತಲೆಗೆ ಗಂಭೀರ ಗಾಯ

ನ್ಯೂಸ್ ನಾಟೌಟ್: ಶಾಲಾ ವಿದ್ಯಾರ್ಥಿನಿಯೊರ್ವಳು ಬಸ್ ನಿಂದ ಹೊರಕ್ಕೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಘಟನೆ ಬಿ.ಸಿ.ರೋಡಿನಲ್ಲಿ ವರದಿಯಾಗಿದೆ.

ಪಾಣೆಮಂಗಳೂರು ಗ್ರಾಮದ ಗುಡ್ಡೆಯಂಗಡಿ ನಿವಾಸಿ ಮುಹಮ್ಮದ್ ರಫೀಕ್ ಎಂಬವರ ಮಗಳು ಅಪ್ಸನಾ ಬಸ್‌ನಿಂದ ಕೆಳಗೆ ಬಿದ್ದು ಗಾಯಗೊಂಡ ವಿದ್ಯಾರ್ಥಿನಿ ಎಂದು ವರದಿ ತಿಳಿಸಿದೆ. ಪೆ.29 ರಂದು ಬೆಳಗ್ಗೆ ಸುಮಾರು 9.30 ಗಂಟೆಗೆ ಅಪ್ಸನಾ ಹೋಗುತ್ತಿದ್ದ ಬಸ್‌ ನಲ್ಲಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮವಾಗಿ ಬಸ್ಸ್ ನಿಂದ ಇಳಿಯಲು ಡೋರ್ ಬಳಿ ನಿಂತಿದ್ದ ವಿದ್ಯಾರ್ಥಿನಿ ಬಸ್‌ನಿಂದ ಒಮ್ಮೆಲೆ ಹೊರೆಗೆ ಎಸೆಯಲ್ಪಟ್ಟಿದ್ದಾಳೆ ಎನ್ನಲಾಗಿದೆ.

ರಸ್ತೆಗೆ ಬಿದ್ದು ಆಕೆಯ ತಲೆಗೆ ಗಂಭೀರ ಗಾಯವಾಗಿದ್ದು, ಮಂಗಳೂರು ನಗರದ ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ರಸ್ತೆ ಬದಿಯಲ್ಲಿ ಕಸ ಎಸೆದ ವ್ಯಕ್ತಿಗೆ 2 ಸಾವಿರ ರೂ. ದಂಡ ಜಡಿದ ಸುಳ್ಯ ನಗರ ಪಂಚಾಯತ್..! ರಿಕ್ಷಾ ಸ್ಟ್ಯಾಂಡ್ ಎದುರು ಕಸ ಹಾಕಿದ್ದ ಬಗ್ಗೆ ವರದಿ ಪ್ರಕಟಿಸಿದ್ದ ನ್ಯೂಸ್ ನಾಟೌಟ್ ವರದಿ ಬೆನ್ನಲ್ಲೇ ಕಠಿಣ ಕ್ರಮ

ನೇಣಿಗೆ ಶರಣಾದ ನವ ವಿವಾಹಿತ

ಮಂಗಳೂರಿನಲ್ಲಿ ಮೊದಲಬಾರಿಗೆ ಪತ್ತೆಯಾದ ‘ಆಲಿವ್‌ ರಿಡ್ಲೆ ಮೊಟ್ಟೆ’,ಹಾಗಂದ್ರೇನು?ಇದರ ವಿಶೇಷತೆಗಳೇನು?ಇಲ್ಲಿದೆ ರಿಪೋರ್ಟ್‌..