ಕರಾವಳಿಕ್ರೈಂದಕ್ಷಿಣ ಕನ್ನಡಮಂಗಳೂರುವೈರಲ್ ನ್ಯೂಸ್

ಭಟ್ಕಳ: ರಾತ್ರಿ ರಸ್ತೆ ಬದಿ ನಿಂತಿದ್ದ ಪೊಲೀಸರಿಗೆ ಗುದ್ದಿದ KSRTC ಬಸ್..! ಸ್ವಲ್ಪ ದೂರದಲ್ಲಿ ಬಸ್ ನಿಲ್ಲಿಸಿ ಚಾಲಕ ಪರಾರಿ..!

ನ್ಯೂಸ್‌ ನಾಟೌಟ್‌: ಕರ್ತವ್ಯ ಮುಗಿಸಿ ಮನೆಗೆ ನಡೆದುಕೊಂಡು ತೆರಳುತ್ತಿದ್ದ 3 ಪೊಲೀಸರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಢಿಕ್ಕಿಯಾಗಿದ್ದು, ಇಬ್ಬರು ಪೊಲೀಸರು ಗಾಯಗೊಂಡಿರುವ ಘಟನೆ ಭಟ್ಕಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಜೂ 21ರ ರಾತ್ರಿ 8.30ರ ಸುಮಾರಿಗೆ ಪೊಲೀಸ್‌ ಸಿಬ್ಬಂದಿ ಕೃಷ್ಣ ಗುಡ್ಡಪ್ಪ, ಕಿರಣ್ ಕುಮಾರ್. ಜಿ ನಾಯ್ಕ‌, ಸುರೇಶ ಪಟಗಾರ ಪೊಲೀಸ್‌ ಕ್ವಾಟರ್ಸ್ ಗೆ ಹೋಗುವ ದಾರಿಯ ಬದಿಯಲ್ಲಿ ಮಾತನಾಡುತ್ತ ನಿಂತಿದ್ದರು. ಆಗ, ಅಡ್ಡಾದಿಡ್ಡಿಯಾಗಿ ಬಸ್‌ ಚಲಾಯಿಸಿಕೊಂಡು ಬಂದ ಭೀಮಣ್ಣ ಜಗ್ಗಲ್ಲವರ್ ಎಂಬಾತನ ನಿರ್ಲಕ್ಷ್ಯದಿಂದ ಬಸ್ ಗುದ್ದಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ಕಿರಣ್ ಕುಮಾರ್. ಜಿ ನಾಯ್ಕ ಹಾಗೂ ಸುರೇಶ ಪಟಗಾರ ಗಾಯಗೊಂಡಿದ್ದಾರೆ. ಕೃಷ್ಣ ಗುಡ್ಡಪ್ಪ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಬಸ್ಸನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿದ ಚಾಲಕ ಪರಾರಿಯಾಗಿದ್ದಾನೆ ಎಂದು ವರದಿ ತಿಳಿಸಿದೆ.

Click 👇

https://newsnotout.com/2024/06/suraj-revanna-arrested-after-prajwal-revanna-kannada-news
https://newsnotout.com/2024/06/naxal-couple-surrendereed-and-awarded-by-govt-kannada-news
https://newsnotout.com/2024/06/bollywood-sonakshi-marriage-and-conversion-issue-kannada-news

Related posts

ದೊಡ್ಡಡ್ಕ ಕೊರಗಜ್ಜ ಕ್ಷೇತ್ರದ ಸಮೀಪ ಕಾರು ಅಪಘಾತ, ಪವಾಡ ಸದೃಶ್ಯ ಎಲ್ಲರೂ ಪಾರು..!

ಒಂದೇ ಕುಟುಂಬದ ಐವರು ಗುಡಿಸಲು ಸಮೇತ ಸಜೀವ ದಹನ! ಕಾರಣ ನಿಗೂಢ..!

ಬದಿಯಡ್ಕ: ಸತ್ತ ಹೆಣ ಉಸಿರಾಡಿದಾಗ, ಶವ ತರುತ್ತಿದ್ದ ಆಂಬುಲೆನ್ಸ್ ನಲ್ಲಿ ನಡೆಯಿತು ಪವಾಡ..!