ನ್ಯೂಸ್ ನಾಟೌಟ್:ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಲು ಪ್ರಪಂಚದಾದ್ಯಂತದ ಕೋಟ್ಯಂತರ ಜನರು ಆಗಮಿಸುತ್ತಿದ್ದಾರೆ. ಈ ಮಹಾ ಕುಂಭಮೇಳ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ ಹೀಗಾಗಿ ೧೪೪ ವರ್ಷಗಳಿಗೊಮ್ಮೆ ಬರುವ ಈ ಕುಂಭ ಮೇಳದಲ್ಲಿ ಪಾಲ್ಗೊಂಡು ಜನ್ಮ ಪಾವನ ಮಾಡಿಕೊಳ್ಳೋಣ ಎಂಬೋದು ಎಲ್ಲರ ಸಂಕಲ್ಪವಾಗಿದೆ.ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಸುಮಾರು 50 ಕೋಟಿ ಜನರು ಈಗಾಗಲೇ ಬಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಇಲ್ಲಿಗೆ ಬಂದ ಅನೇಕ ಸಂತರು, ಭಕ್ತರು, ಸನ್ಯಾಸಿಗಳು ಮತ್ತು ಬಾಬಾಗಳು ಅಘೋರಿಗಳು ಪವಿತ್ರ ನದಿಯಲ್ಲಿ ಸ್ನಾನ ಮಾಡಿದರು. ಆದರೆ ಇದೀಗ ಪ್ರಯಾಗರಾಜ್ ನ ತ್ರಿವೇಣಿ ಸಂಗಮ ಪ್ರದೇಶಗಳಲ್ಲಿನ ನೀರಿನ ಗುಣಮಟ್ಟ ಸ್ನಾನ ಮಾಡಲು ಸೂಕ್ತವಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ವರದಿ ಮಾಡಿದೆ.ಪವಿತ್ರ ಗಂಗಾ ನದಿಯಲ್ಲಿ ಜಲ ಮಾಲಿನ್ಯ ಮತ್ತು ಸ್ವಚ್ಛತೆಯ ಬಗ್ಗೆ ಕಳವಳ ಉಂಟಾಗಿದೆ.
ಏನಾಯ್ತು?
ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ತೀವ್ರವಾದ ಶ್ವಾಸಕೋಶದ ಸೋಂಕು ಉಂಟಾದ ರೋಗಿಗೆ ಚಿಕಿತ್ಸೆ ನೀಡಿದ ಡಾ. ದೀಪಶಿಖಾ ಘೋಷ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ವಿಜ್ಞಾನವನ್ನು ಕೀಳಾಗಿ ನೋಡಬೇಡಿ. ಸೋಂಕಿನಿಂದಾಗಿ ರೋಗಿಗೆ ವೆಂಟಿಲೇಟರ್ ಅಳವಡಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.ಈ ನೀರಿನಲ್ಲಿ ಹೆಚ್ಚಿನ ಮಟ್ಟದ ಮಲ ಕೋಲಿಫಾರ್ಮ್ ಇರುವುದನ್ನು ಸಂಸ್ಥೆಯು ಕಂಡುಹಿಡಿದಿದೆ. ಇದು ಒಳಚರಂಡಿ ಮತ್ತು ಮಾಲಿನ್ಯದ ಸೂಚಕವಾಗಿದೆ.
ಆದಾಗ್ಯೂ, ಅನೇಕ ಪ್ರದೇಶಗಳಲ್ಲಿ ನೀರಿನ ಗುಣಮಟ್ಟ ಈ ಮಟ್ಟವನ್ನು ಮೀರಿದೆ. ಮಹಾ ಕುಂಭಮೇಳದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ನದಿಯಲ್ಲಿ ಸ್ನಾನ ಮಾಡಿದ್ದರಿಂದ ಮಾಲಿನ್ಯದ ಮಟ್ಟ ಹೆಚ್ಚಳಕ್ಕೆ ಕಾರಣ ಎಂದು ಸಿಪಿಸಿಬಿ ವರದಿ ತಿಳಿಸಿದೆ. ಈ ನೀರು ಕಲುಷಿತಗೊಂಡರೆ ವಾಕರಿಕೆ, ವಾಂತಿ, ಭೇದಿ, ಟೈಫಾಯಿಡ್, ಕಾಲರಾ ಮತ್ತು ಚರ್ಮ ರೋಗಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳಲಾಗಿದೆ.ಕುಂಭಮೇಳದಲ್ಲಿ ಒಬ್ಬ ಮಹಿಳೆ ಸ್ನಾನ ಮಾಡಿದಾಗ, ನೀರು ಅವಳ ಮೂಗಿಗೆ ಹೋಯಿತು.ಇದರಿಂದಾಗಿ ಅವರಿಗೆ ಶ್ವಾಸಕೋಶದ ಸೋಂಕು ತಗುಲಿತು. ಅವರು ಚಿಕಿತ್ಸೆಗೆ ಸ್ಪಂದಿಸದ ಕಾರಣ ನಾವು ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಿದ್ದೇವೆ ಎಂದಿದ್ದಾರೆ.