ಕ್ರೈಂಬೆಂಗಳೂರುವಿಡಿಯೋವೈರಲ್ ನ್ಯೂಸ್

ಏಕಾಏಕಿ ಎರಗಿದ ಕೋಲೆಬಸವ..! ಪವಾಡಸದೃಶವಾಗಿ ಬದುಕುಳಿದ ಬೈಕ್ ಸವಾರ..! ಇಲ್ಲಿದೆ ವೈರಲ್ ವಿಡಿಯೋ

236

ನ್ಯೂಸ್ ನಾಟೌಟ್:  ಭಯಾನಕ ಆ್ಯಕ್ಸಿಡೆಂಟ್‌ ವಿಡಿಯೋವೊಂದು ಎಲ್ಲೆಡೆ ವಯರಲ್ ಆಗಿದ್ದು, ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ.ಪವಾಡಸದೃಶವಾಗಿ ಬೈಕ್‌ ಸವಾರನೊಬ್ಬ ಬದುಕುಳಿದಿದ್ದಾನೆ. ಅಪಘಾತಕ್ಕೆ ಕಾರಣವಾದದ್ದು ಒಂದು ಕೋಲೆಬಸವ.

ರಸ್ತೆಯ ಬದಿಯಲ್ಲಿ ಮಾಲಕಿಯ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಕೋಲೆಬಸವ, ಇದ್ದಕ್ಕಿದ್ದಂತೆ, ಯಾವುದೇ ಪ್ರಚೋದನೆಯಿಲ್ಲದೆ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‌ ಸವಾರನಿಗೆ ಎಗರಿ ಗುದ್ದಿದೆ. ಬೈಕ್‌ ಪಲ್ಟಿ ಹೊಡೆದಿದ್ದು, ಸವಾರ ರಸ್ತೆಗೆ ಬಿದ್ದಿದ್ದಾರೆ. ಪಕ್ಕದಲ್ಲಿ ಕ್ಯಾಂಟರ್‌ ಹಾದುಹೋಗುತ್ತಿದ್ದು, ಇನ್ನೇನು ಸವಾರನ ಮೇಲೆ ಹರಿದುಹೋಗಲಿದೆ ಎಂಬ ಕ್ಷಣದಲ್ಲಿ ಕ್ಯಾಂಟರ್‌ ಚಾಲಕ ಥಟ್ಟನೆ ಬ್ರೇಕ್‌ ಹಾಕಿದ್ದಾನೆ.

ಬೈಕ್‌ ಸವಾರ ಪವಾಡಸದೃಶವಾಗಿ ಬದುಕುಳಿದಿದ್ದಾನೆ.ಮಹಾಲಕ್ಷ್ಮಿ ಲೇಔಟ್ ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಬಳಿ ಘಟನೆ ನಡೆದಿದೆ. ಕಳೆದ ವಾರ ನಡೆದಿರುವ ಈ ಘಟನೆಯ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.

See also  ಡ್ರಗ್ಸ್ ಕೇಸ್ ನಲ್ಲಿ ನಟಿ ರಾಗಿಣಿಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್ , ರಾಗಿಣಿ ವಿರುದ್ಧ ಸಾಕ್ಷಿಯೇ ಇಲ್ಲ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget