ಕರಾವಳಿಕ್ರೈಂವೈರಲ್ ನ್ಯೂಸ್

ಬಸದಿಯಿಂದ ಜೈನ ಮುನಿ ನಿಗೂಢ ನಾಪತ್ತೆ..! ಈ ನಾಪತ್ತೆಯ ಬಗ್ಗೆ ಭಕ್ತರು ಹೇಳಿದ್ದೇನು?

ನ್ಯೂಸ್ ನಾಟೌಟ್: ಇದ್ದಕ್ಕಿದ್ದಂತೆ ಬಸದಿಯಿಂದ ಜೈನ ಮುನಿ (Jain Sage) ನಾಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿರುವ ಆಶ್ರಮದಲ್ಲಿ ಇಂದು(ಜುಲೈ ೭)ರಂದು ನಡೆದಿದೆ.

ಹಿರೇಕೋಡಿಯ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಆಶ್ರಮದಿಂದ ಮುನಿಗಳು ನಾಪತ್ತೆಯಾಗಿದ್ದು, ನಿನ್ನೆ ಬೆಳಗ್ಗೆ 8 ಗಂಟೆಯಿಂದ ಜೈನ ಮುನಿ ನಾಪತ್ತೆಯಾಗಿದ್ದರೆ ಎನ್ನಲಾಗಿದೆ. ಮೊನ್ನೆ ರಾತ್ರಿ 10 ಗಂಟೆಯವರೆಗೆ ಆಶ್ರಮದ ತಮ್ಮ ಕೋಣೆಯಲ್ಲಿಯೇ ಇದ್ದರು ಎಂದು ಭಕ್ತರು ತಿಳಿಸಿದ್ದಾರೆ.
ನಿನ್ನೆ ಬೆಳಗ್ಗೆ ಭಕ್ತರು (Devotees) ಆಶ್ರಮಕ್ಕೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕಾಮಕುಮಾರ ನಂದಿ ಮಹಾರಾಜರು ಕಳೆದ 15 ವರ್ಷಗಳಿಂದ ನಂದಿಪರ್ವತದಲ್ಲಿ ವಾಸವಿದ್ದು, ಆಶ್ರಮದ ಜೈನಮುನಿಗಳು ವಾಸವಿದ್ದ ಕೋಣೆಯಲ್ಲಿಯೇ ಅವರು ಬಳಕೆ ಮಾಡುತ್ತಿದ್ದ ಪಿಂಚಿ, ಕಮಂಡಲು ಹಾಗೂ ಮೊಬೈಲ್ ಪತ್ತೆಯಾಗಿದೆ.
ಆದರೆ ಜೈನಮುನಿಗಳು ಎಲ್ಲೇ ಹೋಗಬೇಕಿದ್ದರೂ ಪಿಂಚಿ, ಕಮಂಡಲ ತೆಗೆದುಕೊಂಡು ಹೋಗುವ ಪ್ರತೀತಿ, ಆದರೆ ಪಿಂಚಿ, ಕಮಂಡಲ ಕೋಣೆಯಲ್ಲಿಯೇ ಇರುವ ಹಿನ್ನೆಲೆ ಭಕ್ತರಲ್ಲಿ ಆತಂಕ ಮನೆ ಮಾಡಿದೆ.

ಆಶ್ರಮಕ್ಕೆ ಸಂಬಂಧಿಸಿದ ಕೆಲವು ದಾಖಲೆ ಪತ್ರ ಸಹ ನಾಪತ್ತೆಯಾದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ನಿನ್ನೇ ಇಡೀ ದಿನ ಜೈನ ಆಶ್ರಮದ ಸುತ್ತಮುತ್ತ ಭಕ್ತರು ಹುಡುಕಾಟ ನಡೆಸಿದ್ದಾರೆ. ಮುನಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಇಂದು ಚಿಕ್ಕೋಡಿ ಪೊಲೀಸ್ ಠಾಣೆಗೆ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದಾರೆ. ಆಚಾರ್ಯ ಕಾಮಕುಮಾರನಂದಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ಅವರು ಮುನಿಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದು, ಘಟನೆ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related posts

ಮಡಿಕೇರಿ:ಕಾರು ಮತ್ತು ಈಚರ್ ವಾಹನದ ನಡುವೆ ಡಿಕ್ಕಿ,ಕಾರು ಚಾಲಕ ಸಜೀವ ದಹನ

ಅಮ್ಮನನ್ನು ಜೈಲಿಗೆ ಕರೆದೊಯ್ಯುವಾಗ ಬಿಕ್ಕಿ ಬಿಕ್ಕಿ ಅತ್ತ ಪವಿತ್ರಾ ಗೌಡನ ಮಗಳು..! ಪೊಲೀಸ್ ವ್ಯಾನ್ ನಲ್ಲೇ ಕುಳಿತು ಸಮಾಧಾನ ಮಾಡಿದ ಪವಿತ್ರ ಗೌಡ

ಮನೆಗೆ ಬಂದಪ್ಪಳಿಸಿದ ವಿಮಾನ! 14 ವರ್ಷದ ಬಾಲಕ ಸೇರಿ ಇಬ್ಬರು ಗಂಭೀರ!