ಕ್ರೈಂವೈರಲ್ ನ್ಯೂಸ್

ಬ್ಯಾರಿಕೇಡ್ ಗೆ ಬೈಕ್ ಡಿಕ್ಕಿ..! ಪೊಲೀಸ್ ಪೇದೆ ದುರಂತ ಅಂತ್ಯ!

ನ್ಯೂಸ್ ನಾಟೌಟ್ : ಪೊಲೀಸ್ ಬ್ಯಾರಿಕೇಡ್‌ಗೆ ಬೈಕ್‌ ಡಿಕ್ಕಿಯಾದ ಪರಿಣಾಮ ಬೈಕ್‌ನಲ್ಲಿದ್ದ ಪೊಲೀಸ್ ಪೇದೆ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ (Kolara) ನಡೆದಿದೆ.

ಕೆಜಿಎಫ್ ಡಿಎಆರ್ ಪೊಲೀಸ್ ಪೇದೆ ಚಿರಂಜೀವಿ (37) ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಮಾರಿಕುಪ್ಪಂ ಬಳಿ ಮೂರು ದಿನದ ಹಿಂದೆ ಬ್ಯಾರಿಕೇಡ್‌ಗೆ ಬೈಕ್‌ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದರು.

ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಆದರೆ ಪೊಲೀಸ್ ಪೇದೆ ಚಿರಂಜೀವಿ ಇಂದು (ಶುಕ್ರವಾರ) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಂಡರ್‌ಸನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕೆಜಿಎಫ್ ಡಿಎಆರ್ ಪೊಲೀಸ್ ಸಿಬ್ಬಂದಿಯಿಂದ ಸಹೊದ್ಯೋಗಿ ಅಂತಿಮ ದರ್ಶನ ಪಡೆದು ವಿಧಾಯ ಹೇಳಿದ್ದಾರೆ. ಬಂಗಾರಪೇಟೆ ತಾಲ್ಲೂಕಿನ ದೋಣಿಮಡಗು ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

Related posts

215 ಕಿ.ಮೀ. ವೇಗದಲ್ಲಿ ಲಂಬೋರ್ಗಿನಿ ಓಡಿಸಿದ ರೋಹಿತ್ ಶರ್ಮಾ..! ಶಾಕ್ ಕೊಟ್ಟ ಮುಂಬೈ ಪೊಲೀಸರು

ಯಾನ್ ಬರ್ಪುಜ್ಜಿ…ಕಂಡನಿಯೇ ಬೊಡ್ಚಿ: ಪ್ರಿಯಕರನ ಜತೆ ಪರಾರಿಯಾದ 3 ಮಕ್ಕಳ ತಾಯಿ ಮೊಂಡು ಹಠ

ದೊಡ್ಡ ದೊಡ್ಡ ಶೋರೂಂಗಳೇ ಇವರ ಟಾರ್ಗೆಟ್,ಲಕ್ಷಾಂತರ ಮೌಲ್ಯದ ಸೀರೆಗಳನ್ನು ಒಳಉಡುಪಿನಲ್ಲಿ ತುಂಬಿಸಿ ಯಾಮಾರಿಸುತ್ತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಅರೆಸ್ಟಾಗಿದ್ದೇಗೆ?