ಕರಾವಳಿ

ಸಕಲ ಸರಕಾರಿ ಗೌರವಗಳೊಂದಿಗೆ ನವಿಲಿನ ಅಂತ್ಯಸಂಸ್ಕಾರ

ಬಂಟ್ವಾಳ: ಸಕಲ ಸರಕಾರಿ ಗೌರವಗಳೊಂದಿಗೆ ರಾಷ್ಟ್ರ ಪಕ್ಷಿ ನವಿಲಿನ ಅಂತ್ಯ ಸಂಸ್ಕಾರ ನಡೆದಿರುವ ಘಟನೆ ಬಂಟ್ವಾಳದಿಂದ ವರದಿಯಾಗಿದೆ.

ರಸ್ತೆಯ ಮಧ್ಯೆ ನವಿಲೊಂದರ ಮೃತದೇಹ ಪತ್ತೆಯಾಗಿತ್ತು, ವಿದ್ಯುತ್ ಶಾಕ್ ಹೊಡೆದು ನವಿಲು ಮೃತಪಟ್ಟಿರುವುದಾಗಿ ಬಂಟ್ವಾಳ ಅರಣ್ಯ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದರು.  ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ರಕ್ಷಕಿ ಸ್ಮಿತಾ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ನವಿಲಿನ ಮೃತದೇಹವನ್ನು ಇಲಾಖೆ ನಿಯಮಾವಳಿಯಂತೆ ದಹನ ಕಾರ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

Related posts

ಮಂಗಳೂರು: ಇಂದಿರಾ ಕ್ಯಾಂಟೀನ್‌ ಬಳಿ ಬಸ್‌ ನಿರ್ವಾಹಕನ ಶವ ಪತ್ತೆ..! ಪ್ರಕರಣದ ಸುತ್ತ ಹಲವು ಅನುಮಾನ..!

ಮಂಗಳೂರು: ಕೆಲಸಕ್ಕೆ ಹೋಗುತ್ತಿದ್ದ ಪೊಲೀಸ್‌ ಹಾಗೂ ಪತ್ನಿಗೆ ಅವಾಚ್ಯ ಪದಗಳಿಂದ ನಿಂದನೆ, ಪೊಲೀಸ್ ಅಧಿಕಾರಿಯ ಪತ್ನಿಯ ಜೊತೆಗೆ ಅಸಭ್ಯ ವರ್ತನೆ

ಟಿಕೆಟ್‌ ದರ ಏರಿಸದಿದ್ದರೆ KSRTC ಸಂಸ್ಥೆ ಉಳಿಯಲ್ಲ ಎಂದ ನಿಗಮದ ಅಧ್ಯಕ್ಷ..! ದರ ಹೆಚ್ಚಳ ಪುರುಷರಿಗೆ ಮಾತ್ರವಾ..? ಶಾಸಕ ಹೇಳಿದ್ದೇನು..?