ಕರಾವಳಿ

ಬಂಟ್ವಾಳ:ಮೂರು ಮನೆಗಳಿಗೆ ಮಾರಕಾಸ್ತ್ರ ಹಿಡಿದು ನುಗ್ಗಿದ ಕೇರಳದ ಅಂತರಾಜ್ಯ ಕಳ್ಳರು..! ನಟೋರಿಯಸ್ ಕಳ್ಳನನ್ನು ಅಟ್ಟಾಡಿಸಿ ಹಿಡಿದು ಚಳಿ ಬಿಡಿಸಿದ ಗ್ರಾಮಸ್ಥರು..!ಮುಂದೇನಾಯ್ತು?

ನ್ಯೂಸ್ ನಾಟೌಟ್ : ಕೇರಳದ ಖತರ್ನಾಕ್ ಕಳ್ಳರ ಗ್ಯಾಂಗೊಂದು ರಾತ್ರಿ ವೇಳೆ ಮಾರಾಕಾಸ್ತ್ರಗಳೊಂದಿಗೆ ಮೂರು ಮನೆಗಳಿಗೆ ನುಗ್ಗಿ ಚಿನ್ನಾಭರಣಕ್ಕಾಗಿ ಜಾಲಾಡಿ ಕೊನೆಗೆ ಸಾರ್ವಜನಿಕರು ಗೂಸಾ ನೀಡಿದ ಘಟನೆ ವರದಿಯಾಗಿದೆ.ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಂಚಿ ಗ್ರಾಮದ ಕಾಡಂಗಡಿ ಎಂಬಲ್ಲಿ ಈ ಘಟನೆ ನಡೆದಿದ್ದು,ಸ್ಥಳೀಯರು ಕಾರ್ಯಾಚರಣೆ ನಡೆಸಿ ಓರ್ವ ಕಳ್ಳನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಕಾರು ಮತ್ತು ಬೈಕಿನಲ್ಲಿ ಹಗಲು ಹೊತ್ತಿನಲ್ಲಿ ಸುತ್ತಾಡುತ್ತಾ ಮನೆಗಳ ಆಯ್ಕೆ ಮಾಡುವ ನಟೋರಿಯಸ್ ಕಳ್ಳರ ತಂಡ ರಾತ್ರಿ ವೇಳೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಂಚಿ ಗ್ರಾಮದ ಕಾಡಂಗಡಿ ಎಂಬಲ್ಲಿನ ಮೂರು ಮನೆಗಳಿಗೆ ನುಗ್ಗಿದೆ. ಚಿನ್ನಾಭರಣಕ್ಕಾಗಿ ಕಪಾಟುಗಳ ಮುರಿದು ಜಾಲಾಡಿದೆ.ಈ ವೇಳೆ ಕಪಾಟಿನಲ್ಲಿ ಸಿಕ್ಕಿದ ಆಭರಣಗಳನ್ನು ಪರೀಕ್ಷಿಸಿದ ಕಳ್ಳರು ಅದೆಲ್ಲವೂ ನಕಲಿ ಎಂಬುದನ್ನು ಖಾತ್ರಿ ಮಾಡಿಕೊಂಡಿದ್ದಾರೆ.ಬಳಿಕ ಎಸೆದುಹೋಗಿದ್ದಾರೆ.

ಬೈಕ್ ಮತ್ತು ಕಾರುಗಳಲ್ಲಿ ನಂಬರ್ ಪ್ಲೇಟ್ ಪತ್ತೆಯಾಗಿದ್ದು, ಮಂಚಿ ಪರಿಸರದ ನಾಗರೀಕರೆಲ್ಲ ಸೇರಿ ಧೈರ್ಯ ಮಾಡಿ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ. ಖದೀಮರ ತಂಡದ ಪೈಕಿ ಓರ್ವನನ್ನು ಬೆನ್ನಟ್ಟಿ ಹಿಡಿದು ಆತನ ಚಳಿ ಬಿಡಿಸಿದ್ದಾರೆ. ಆ ಸಂದರ್ಭ ಸಿಕ್ಕಿಬಿದ್ದಿದ್ದ ಕೇರಳದ ಪೆರ್ಲ ಪರಿಸರದ ಓರ್ವ ಖದೀಮ ಸತ್ಯ ಬಾಯ್ಬಿಟ್ಟಿದ್ದು, “ನನ್ನ ಮೇಲೆ ಇಪ್ಪತ್ತಕ್ಕೂ ಹೆಚ್ಚು ಕಳ್ಳತನ ಕೇಸುಗಳಿವೆ’ ಎಂಬುದನ್ನು ಒಪ್ಪಿಕೊಂಡಿದ್ದಾನೆ.

ಬೈಕ್ ಸಹಿತ ಸಿಕ್ಕಿಬಿದ್ದ ಕಳ್ಳನಿಗೆ ಒದೆನೀಡಿದ ಬಳಿಕ ಸ್ಥಳೀಯರು ಬಂಟ್ವಾಳ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಆದರೆ ಕಳ್ಳರ ಗ್ಯಾಂಗ್‌ನಲ್ಲಿದ್ದ ಉಳಿದವರಿಗಾಗಿ ಶೋಧ ಕಾರ್ಯ ಆರಂಭವಾಗಬೇಕಿದೆ.

Related posts

ಕಲ್ಲುಗುಂಡಿ: ಏ.26ರಂದು ಲೋಕಸಭಾ ಚುನಾವಣೆ ಹಿನ್ನಲೆ , ಚೆಕ್‌ ಪೋಸ್ಟ್‌ ನಲ್ಲಿ ವಾಹನಗಳ ತಪಾಸಣೆ ಕಾರ್ಯ ಬಿರುಸು

ಆರೋಗ್ಯ ಸ್ಥಿರ, ಸಿಟಿ ಸ್ಕ್ಯಾನ್‌ ಕೂಡ ನಾರ್ಮಲ್‌, ಆದ್ರೂ ಡಿಸ್ಚಾರ್ಜ್‌ ಆಗೊಲ್ಲ ಅಂತಾಳೆ ಚೈತ್ರಾ ಕುಂದಾಪುರ! ಚೈತ್ರಾ ಕುಂದಾಪುರ ಹೈಡ್ರಾಮಾಕ್ಕೆ ಕಾರಣವೇನು?

ಸೌಜನ್ಯ ಹತ್ಯೆ ಪ್ರಕರಣ: ಮರು ತನಿಖೆಗೆ ಒತ್ತಾಯಿಸಿ ನಿಂತಿಕಲ್ಲಿನಿಂದ ವಾಹನ ಜಾಥಾ ಆರಂಭ..ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗಿ