ಕರಾವಳಿಕ್ರೈಂ

ಬಂಟ್ವಾಳ: ಸಲಿಂಗ ಲೈಂಗಿಕ ಕಿರುಕುಳ ನೀಡಿದ್ದ ಮದ್ರಸಾ ಅಧ್ಯಾಪಕ! 53 ವರ್ಷ ಕಠಿಣ ಸಜೆ ಮತ್ತು ದಂಡ!

ನ್ಯೂಸ್ ನಾಟೌಟ್: ಇಬ್ಬರು ವಿದ್ಯಾರ್ಥಿಗಳಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮದ್ರಸಾ ಅಧ್ಯಾಪಕ ಬಂಟ್ವಾಳದ ವಿಟ್ಲ ಪಡ್ನೂರು ಬದ್ರಕಡಂಬು ನಿವಾಸಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.

ಅಪರಾಧಿ ಅಬ್ದುಲ್ ಹನೀಫ್ ಮದನಿ (44) ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಫೋಕ್ಸೋ ಕಾನೂನು ಹಾಗೂ ಇತರ ಸೆಕ್ಷನ್ ಅಡಿಯಲ್ಲಿ ಒಟ್ಟು 53 ವರ್ಷ ಕಠಿಣ ಸಜೆ ಮತ್ತು 3.25 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದರೆ ಮೂರುವರೆ ವರ್ಷ ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.

2016 ರಲ್ಲಿ ಅಂಬಲತ್ತರ ಪೊಲೀಸ್ ಠಾಣೆಯಲ್ಲಿ ಪುಕರಣ ದಾಖಲಾಗಿದ್ದು, ಹಲವು ದಿನಗಳಲ್ಲಿ 10 ಮತ್ತು 11 ವರ್ಷದ ಇಬ್ಬರು ಮದ್ರಸಾ ವಿದ್ಯಾರ್ಥಿಗಳಿಗೆ ಸಲಿಂಗರತಿ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು. ಇದೇ ರೀತಿಯ ಇನ್ನೊಂದು ಪುಕರಣವೊಂದರಲ್ಲಿ ಎರಡು ವರ್ಷಗಳ ಹಿಂದೆ ಈತನಿಗೆ ನ್ಯಾಯಾಲಯ 20 ವರ್ಷ ಸಜೆ ವಿಧಿಸಿತ್ತು ಎಂದು ತಿಳಿದು ಬಂದಿದೆ. ಫೋಕ್ಸೋದ ಎರಡು ಸೆಕ್ಷನ್ ಗಳಡಿ ನ್ಯಾಯಾಲಯ ತಲಾ 20 ವರ್ಷ ಸಜೆ, ಐಪಿಸಿಯ ಎರಡು ಸೆಕ್ಷನ್ ಗಳಡಿಯಲ್ಲಿ ಈಗಿನ 33 ವರ್ಷ ಸಹಿತ ಒಟ್ಟು 53 ವರ್ಷ ಸಜೆ ವಿಧಿಸಿದೆ.

Related posts

ಸುಳ್ಯ: ಕ್ರೀಡಾ ಕ್ಷೇತ್ರದಲ್ಲಿ ಮಿಂಚಿದ ಸೈಂಟ್ ಜೋಸೆಫ್ ಪ್ರೌಢ ಶಾಲೆಯ ಪ್ರತಿಭೆ, ಚಕ್ರ ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಮನ್ಯು ಎಸ್. ಶೆಟ್ಟಿ

ಸಂಪಾಜೆಯ ವ್ಯಕ್ತಿ ಎರ್ನಾಕುಲಂನಲ್ಲಿ ಕಾಣೆ

ಇಂಧನ ಸಚಿವ ಕೆ.ಜೆ ಜಾರ್ಜ್ ಕಚೇರಿಯಲ್ಲಿ ಕಳ್ಳತನ..!