ನ್ಯೂಸ್ ನಾಟೌಟ್: ನಿಷೇಧಿತ ಸೇತುವೆಯ ಮೇಲೆ ಬಲವಂತವಾಗಿ ಚಾಲಕನೊಬ್ಬ ಗೋಡ್ಸ್ ಟೆಂಪೋವನ್ನು ನುಗ್ಗಿಸಿದ್ದರಿಂದ ವಾಹನವೊಂದು ತಲೆ ಮೇಲಾಗಿ ಕಬ್ಬಿಣದ ತಡೆಬೇಲಿಯಲ್ಲಿ ಸಿಕ್ಕಿ ಹಾಕಿಕೊಂಡ ಘಟನೆ ಶನಿವಾರ (ಡಿ.21) ನಡೆದಿದೆ.
ಟಾಟಾ ಕಂಪೆನಿಯ ಏಸ್ ಗೂಡ್ಸ್ ಟೆಂಪೋ ಸೇತುವೆಯ ಸಮೀಪ ಬಂದಿದ್ದು ಹೊಸ ಸೇತುವೆಯಲ್ಲಿ ಹೋಗುವುದನ್ನು ಬಿಟ್ಟು ಬಿ.ಸಿ.ರೋಡಿನಿಂದ ಗೂಡಿನಬಳಿಯಾಗಿ ಪಾಣೆಮಂಗಳೂರು ಕಡೆಗೆ ಸಂಚಾರಕ್ಕೆ ಯತ್ನಿಸಿದಾಗ ಅದು ಸೇತುವೆಯ ಮೇಲೆ ಘನ ವಾಹನ ಸಂಚಾರ ಮಾಡದಂತೆ ಹಾಕಲಾದ ಕಬ್ಬಿಣದ ತಡೆಬೇಲಿಯಲ್ಲಿ ಸಿಲುಕಿಕೊಂಡಿದೆ.
ಚಾಲಕನ ಸಂಪೂರ್ಣ ನಿರ್ಲಕ್ಷ್ಯದಿಂದ ಸೇತುವೆಯಲ್ಲಿ ತಲೆ ಮೇಲೆಯಾಗಿ ನಿಂತುಕೊಂಡಿದೆ. ಇದು ಶಂಬೂರು ಕಡೆಯ ವಾಹನ ಎಂದು ತಿಳಿದು ಬಂದಿದ್ದು ಮಸಾಲೆ ಪೌಡರ್ ಮಾರ್ಕೆಟಿಂಗ್ ಮಾಡುತ್ತಿತ್ತು ಎಂದು ತಿಳಿದು ಬಂದಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.