ಕರಾವಳಿಕ್ರೈಂ

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ತೇಲಿ ಬಂದ ಅಪರಿಚಿತ ಮಹಿಳೆಯ ಮೃತದೇಹ..! ಸುಮಾರು 15 ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ..!

203

ನ್ಯೂಸ್ ನಾಟೌಟ್: ಮಹಿಳೆಯೋರ್ವರ ಶವ ನೇತ್ರಾವತಿ ನದಿಯಲ್ಲಿ ತೇಲಾಡುವ ಸ್ಥಿತಿಯಲ್ಲಿ ಮಂಗಳವಾರ(ಆ.20) ಬಂಟ್ವಾಳದಲ್ಲಿ ಪತ್ತೆಯಾಗಿದೆ.

ಶಂಭೂರು ಗ್ರಾಮದ ಎ.ಎಮ್.ಆರ್. ಪವರ್ ಲಿಮಿಟೆಡ್ ಡ್ಯಾಂ ನ 6ನೇ ಗೇಟ್ ನ ಬಳಿ ಸುಮಾರು 40 ರಿಂದ 50 ವರ್ಷದ ಅಪರಿಚಿತ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಇರುವುದು ಕಂಡು ಬಂದಿದ್ದು, ಸುಮಾರು 15 ದಿನಗಳ ಹಿಂದೆ ಮಹಿಳೆ ನೀರಿಗೆ ಬಿದ್ದು ‌ಮೃತಪಟ್ಟಿರಬಹುದು ಎಂದು‌ ಶಂಕಿಸಲಾಗಿದೆ.

ಎ.ಎಮ್.ಆರ್ ಡ್ಯಾಂ ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಶೆಟ್ಟಿ ಎಂಬವರು ಮೃತದೇಹವನ್ನು ನೋಡಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಎಸ್.ಐ. ಹರೀಶ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

See also  ಮೈಸೂರು ಫೋಟೋ ಗ್ರಾಫರ್ ಕೊಲೆ ಪ್ರಕರಣ: 5ನೇ ಆರೋಪಿ ಅಣಿಲೆ ಜಯರಾಜ ಶೆಟ್ಟಿ ಅರೆಸ್ಟ್
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget