ಕರಾವಳಿಕ್ರೈಂ

ಬಂಟ್ವಾಳ: ಹಿಂದೂ ಮುಖಂಡನಿಗೆ ರಾತ್ರಿ ಚೂರಿ ಇರಿತ..! ಸ್ನೇಹಿತನಿಂದಲೇ ಕೃತ್ಯ..!

ನ್ಯೂಸ್ ನಾಟೌಟ್: ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಸ್ನೇಹಿತನೇ ಚೂರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ಭಾನುವಾರ(ಎ.14) ರಾತ್ರಿ ನಡೆದಿದೆ.

ಹಿಂದೂ ಯುವಸೇನೆಯ ಮುಖಂಡ ಉದ್ಯಮಿಯಾಗಿರುವ ಪುಷ್ಪರಾಜ್ ಎಂಬವರಿಗೆ ಜಕ್ರಿಬೆಟ್ಟು ಎಂಬಲ್ಲಿ ಚೂರಿ ಇರಿತವಾಗಿದೆ ಎಮದು ವರದಿ ತಿಳಿಸಿದೆ. ಇರಿತಕ್ಕೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ.ರಿಕ್ಷಾದಲ್ಲಿ ಜತೆಯಾಗಿ ತೆರಳುತ್ತಿದ್ದಾಗಲೇ ಸ್ನೇಹಿತ ರವಿ ಎಂಬಾತ ಚೂರಿಯಿಂದ ಕುತ್ತಿಗೆಗೆ ಇರಿದಿದ್ದಾನೆ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಪುಷ್ಪರಾಜ್ ರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿ ರವಿ ಚೂರಿ ಇರಿದು ಪರಾರಿಯಾಗಿದ್ದಾನೆ. ಬಂಟ್ವಾಳ ನಗರ ಠಾಣಾ ಪೋಲೀಸರು ಸ್ಥಳಕ್ಕೆ ‌ಭೇಟಿ ನೀಡಿದ್ದು ,ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಗೋವುಗಳ ರಕ್ಷಣೆಗೆ ಸಾವಿರ ರೂ. ಕೊಟ್ಟು ತಲ್ವಾರ್ ಖರೀದಿಸಿ: ಸಾಧ್ವಿ ಸರಸ್ವತಿ

ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೆಟ್ಟಿಲೇರಿದ ಬೊಮ್ಮಾಯಿ..! ಈ ಬಗ್ಗೆ ವಕೀಲ ಜಗದೀಶ್ ಹೇಳಿದ್ದೇನು..? ಇಲ್ಲಿದೆ ವಿಡಿಯೋ

ರಾಮಾಯಣ ನಾಟಕ ಪ್ರದರ್ಶಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ 1.02 ಲಕ್ಷ ರೂ. ದಂಡ..! ಹಾಸ್ಟೆಲ್ ವಸತಿಗಳನ್ನು ಖಾಲಿ ಮಾಡುವಂತೆ ಆದೇಶ..! ನಾಟಕದಲ್ಲಿ ಅಂಥದ್ದೇನಿತ್ತು..?