ಕರಾವಳಿ

ಬಂಟ್ವಾಳ: ಭಗವಾಧ್ವಜ ಹಾಗೂ ಹನುಮನ ಚಿತ್ರ ಪುಡಿಗೈದ ಕಿಡಿಗೇಡಿಗಳು

ಬಂಟ್ವಾಳ: ಇಲ್ಲಿನ ಎಸ್ ವಿಎಸ್ ಕಾಲೇಜಿನ ಬಳಿ ಇರುವ ಮಂಡಾಡಿ ಮಾರ್ಗಸೂಚಿ ಕಟ್ಟೆ ಹಾಗೂ ಅದರಲ್ಲಿದ್ದ ಭಗವಾಧ್ವಜ ಹಾಗೂ ಹನುಮನ ಚಿತ್ರವನ್ನು ದುಷ್ಕರ್ಮಿಗಳು ಹಾನಿ ಮಾಡಿದ ಘಟನೆ  ನಡೆದಿದೆ.

ಕಳೆದ 10-12 ವರ್ಷಗಳಿಂದ ಈ ಕಟ್ಟೆ ಇದ್ದು , ಕಳೆದ ಕೆಲವು ದಿನಗಳ ಹಿಂದೆ ವಿಶ್ವ ಹಿಂದೂ ಪರಿಷತ್ ಮಂಡಾಡಿ ಶಾಖೆಯು ನವೀಕರಣಗೊಳಿಸಿತ್ತು. ಅದಕ್ಕೆ ಹನುಮಂತನ ಚಿತ್ರ , ಭಗವಾಧ್ವಜ ಅಳವಡಿಸಿ ನವೀಕರಣಗೊಳಿಸಿತ್ತು. ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಕಟ್ಟೆಯನ್ನು ಒಡೆದುಹಾಕಿ, ಭಗವಾಧ್ವಜವನ್ನು ಕಿತ್ತೊಯ್ದಿದ್ದಾರೆ. ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ರಿಟ್ಜ್ ಕಾರು ಈ ದಾರಿಯಲ್ಲಿ ಸಂಚರಿಸಿದ್ದು , ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂಟ್ವಾಳ ವಿಹಿಂಪ ಜಿಲ್ಲಾ ಸಹಸಂಚಾಲಕ ಗುರುರಾಜ್ ಬಂಟ್ವಾಳ, ದೀಪಕ್ ಬಂಟ್ವಾಳ, ಸಂತೋಷ್ ಸರಪಾಡಿ, ಶಿವಪ್ರಸಾದ್ ತುಂಬೆ, ಅನಿಲ್ ಮಂಡಾಡಿ, ದೂರು ನೀಡಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.

Related posts

‘ರೌಡಿಗಳಿಗೆಲ್ಲ ಮನೆ ಬಾಡಿಗೆ ನೀಡಬೇಡಿ’ ಎಂದಿದ್ದಕ್ಕೆ ಕತ್ತಿಯಿಂದ ಕಡಿದು ಕೊಲೆಗೆ ಯತ್ನ, ಕತ್ತಿ ಹಿಡಿದು ಬಂದ ರೌಡಿ ತಲೆಮರೆಸಿಕೊಂಡಿದ್ದೆಲ್ಲಿ..?

ಉಜಿರೆ: ಬೈಕ್ -ಕಾರು ನಡುವೆ ಭೀಕರ ಅಪಘಾತ, ಎರಡು ತುಂಡಾಗಿ ರಸ್ತೆಗೆ ಎಸೆಯಲ್ಪಟ್ಟ ಬೈಕ್..!

ಬೆಳ್ತಂಗಡಿ: ಕುದ್ಯಾಡಿ ಗ್ರಾಮದ ಹಿಮರಡ್ಡ ಪ್ರದೇಶದಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಪ್ರತ್ಯಕ್ಷ..!