ಕರಾವಳಿ

ಮೂರು ಮಕ್ಕಳಿಗೆ ಜನ್ಮ ನೀಡಿದ ಕರಾವಳಿಯ ಮಹಾ ತಾಯಿ

ನ್ಯೂಸ್ ನಾಟೌಟ್:  ಇಲ್ಲಿನ ಬರಿಮಾರು ಗ್ರಾಮದ ಗಾಣದಪಾಲು ನಿವಾಸಿ ಮಹಿಳೆಯೊಬ್ಬರು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಲ್ಲಿನ ನಿವಾಸಿ ಪದ್ಮನಾಭ ಪೂಜಾರಿ ಅವರ ಪತ್ನಿ ದೀಕ್ಷಿತಾ ಮಂಗಳೂರು ಲೇಡಿಗೋಷನ್ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದರು.

ಹೆರಿಗೆ ತಜ್ಞೆ ಡಾ.ವಿನೀತ ಶೆಟ್ಟಿ ಅವರು ಬುಧವಾರ ಶಸ್ತ್ರಚಿಕಿತ್ಸೆ ನಡೆಸಿ ಮೂರು ಮಕ್ಕಳನ್ನು ಹೆರಿಗೆ ಮಾಡಿಸಿದ್ದು, ಒಂದು ಗಂಡು ಮತ್ತು ಎರಡು ಹೆಣ್ಣು ಮಗು ತಾಯಿಯೊಂದಿಗೆ ತುರ್ತು ನಿಗಾ ಘಟಕದಲ್ಲಿ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

Related posts

1963ರಲ್ಲಿ ಪೆಟ್ರೋಲ್ ಖರೀದಿಸಿದ ಬಿಲ್ ವೈರಲ್..! 60 ವರ್ಷಗಳ ಹಿಂದೆ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತಾ..?

ಅಯೋಧ್ಯೆ ತಲುಪಿದ ಕಾರ್ಕಳದ ಕೃಷ್ಣ ಶಿಲೆ

ಮಂಜೇಶ್ವರ: ಬಾಲಕಿಯನ್ನು ಎತ್ತಿ , ಎಸೆದು ಅಟ್ಟಹಾಸ ಮೆರೆದ ಪಾಪಿ