ವೈರಲ್ ನ್ಯೂಸ್

ಬ್ಯಾಂಕ್‌ ನೌಕರರಿಗೆ ಇನ್ನು ವಾರಕ್ಕೆ 5 ದಿನ ಮಾತ್ರ ಕೆಲಸ..? ಏನಿದು ಹೊಸ ನಿಯಮ..?

207

ನ್ಯೂಸ್ ನಾಟೌಟ್: ಬ್ಯಾಂಕ್‌ಗಳಲ್ಲಿ ವಾರಕ್ಕೆ 5 ದಿನ ಮಾತ್ರ ಕೆಲಸ ಎಂಬ ನಿಯಮವು ಪ್ರಸಕ್ತ ವರ್ಷದಿಂದಲೇ ಜಾರಿಗೆ ಬರುವ ಸಾಧ್ಯತೆ ಅಧಿಕವಾಗಿದೆ ಎಂದು ವರದಿ ತಿಳಿಸಿದೆ.

ವಿವಿಧ ಬ್ಯಾಂಕ್‌ಗಳ ಉದ್ಯೋಗಿಗಳ ಸಂಘಟಿತ ಒಕ್ಕೂಟ, ಯುನೈಟೆಡ್‌ ಫೋರಂ ಆಫ್ ಬ್ಯಾಂಕ್‌ ಯೂನಿಯನ್‌ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿದ್ದು, ಅದನ್ನು ಸರ್ಕಾರ ಪರಿಗಣಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಬ್ಯಾಂಕ್ ನೌಕರರ ಒಕ್ಕೂಟ ತಿಳಿಸಿದೆ.

ಆದರೆ, ಬ್ಯಾಂಕ್‌ಗಳ ಶಾಖೆಗಳ ಕಾರ್ಯನಿರ್ವಹಣೆ ಅವಧಿಯಲ್ಲಿ(ಗ್ರಾಹಕರು ವಹಿವಾಟು ನಡೆಸುವ ಅವಧಿ) ಇಳಿಕೆ ಮಾಡಲಾಗುವುದಿಲ್ಲ ಎಂದು ಯೂನಿಯನ್‌ ಹೇಳಿಕೊಂಡಿದೆ ಎನ್ನಲಾಗಿದ್ದು,. ಕೇಂದ್ರ ವಿತ್ತ ಸಚಿವಾಲಯದ ಅನುಮೋದನೆ ಪಡೆದ ಬಳಿಕವೇ ಹೊಸ ನಿಯಮ ಜಾರಿಯಾಗುವ ಸಾಧ್ಯತೆಗಳು ಇವೆ.

ಸದ್ಯ ಬ್ಯಾಂಕ್‌ ಶಾಖೆಗಳಿಗೆ ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರ ಸಾರ್ವಜನಿಕ ರಜೆ ಇದೆ. ಆದರೆ, ತಿಂಗಳ ಎಲ್ಲ ಶನಿವಾರ, ಭಾನುವಾರವೂ ರಜೆ ನೀಡಬೇಕು ಎನ್ನುವುದು ಉದ್ಯೋಗಿಗಳ ಬೇಡಿಕೆಯಾಗಿದೆ. ಇದರ ಜತೆಗೆ ಬ್ಯಾಂಕ್‌ ಉದ್ಯೋಗಿಗಳು ಬಹು ನಿರೀಕ್ಷಿತ ಬೇಡಿಕೆ ವೇತನ ಏರಿಕೆಯೂ ಜೂನ್‌ನಿಂದ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಬ್ಯಾಂಕ್‌ ಉದ್ಯೋಗಿಗಳ ಒಕ್ಕೂಟ ಮಾಹಿತಿ ನೀಡಿದೆ.

See also  ಕೇರಳದ ಭೂಕುಸಿತ ಉಲ್ಲೇಖಿಸಿ ಭಯಾನಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ..! ಅಮಾವಾಸ್ಯೆಯ ಬಳಿಕ ಎಲ್ಲವೂ ಬದಲಾಗುತ್ತಾ..?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget