ಕ್ರೈಂಬೆಂಗಳೂರುವೈರಲ್ ನ್ಯೂಸ್

ಪ್ರತಿಷ್ಠಿತ ಬ್ಯಾಂಕ್ ನ ಕೆಲಸ ಬಿಟ್ಟು ಈಕೆ ಕಳ್ಳತನಕ್ಕೆ ಇಳಿದದ್ದೇಕೆ..? ಕಿಲಾಡಿ ಕಳ್ಳಿಯ ಖತರ್ನಾಕ್ ಸ್ಟೋರಿ ಇಲ್ಲಿದೆ

231

ನ್ಯೂಸ್ ನಾಟೌಟ್: ಹೋಟೆಲ್, ಪಿಜಿಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್‌ಟಾಪ್‌ಗಳನ್ನು ಜೆಸ್ಸಿ ಅಗರ್ ವಾಲ್ ಎಂಬಾಕೆ ಕದಿಯುತ್ತಿದ್ದಳು ಎನ್ನಲಾಗಿದ್ದು, ಈಕೆ ಬ್ಯಾಂಕ್ ಉದ್ಯೋಗಿಯಾಗಿದ್ದಳು ಎಂದು ವರದಿ ತಿಳಿಸಿದೆ.

ಹೋಟೆಲ್, ಪಿಜಿಗಳಲ್ಲಿ ರೂಂ ಪಡೆಯುವ ಈಕೆ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದಳು. ಹೋಟೆಲ್‌ ಹಾಗೂ ಪಿಜಿಯಲ್ಲಿರವವರು ಟಿಫಿನ್, ಊಟಕ್ಕೆ ತೆರಳಿದ ಸಂದರ್ಭದಲ್ಲಿ ಕ್ಷಣಾರ್ಧದಲ್ಲಿ ಲ್ಯಾಪ್‌ಟಾಪ್ ಕದ್ದು ಎಸ್ಕೇಪ್ ಆಗುತ್ತಿದ್ದಳು. ಎಚ್‌ಎಎಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಕಿಲಾಡಿ ಕಳ್ಳಿಯನ್ನು ಬಂಧಿಸಿದ್ದಾರೆ. ಇನ್ನೂ ಈಕೆ ಐಸಿಐಸಿಐ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಕೆಲಸ ಬಿಟ್ಟು ಕೋರಮಂಗಲ, ಇಂದಿರಾನಗರ, ಎಚ್‌ಎಎಲ್ ಸುತ್ತಮುತ್ತ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿದ್ದಳು. ಸದ್ಯ ಲ್ಯಾಪ್‌ಟಾಪ್ ಕಳ್ಳಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಬಂಧಿತಳಿಂದ 10 ಲಕ್ಷ ಮೌಲ್ಯದ 24 ಲ್ಯಾಪ್‌ಟಾಪ್‌ಗಳನ್ನು ಸೀಜ್ ಮಾಡಲಾಗಿದೆ.

See also  ಡಿ.ಕೆ.ಶಿವಕುಮಾರ್‌ ಗೆ ಮತ್ತೆ ಕಂಟಕ..! ಹೆಲಿಕಾಪ್ಟರ್‌ ಲ್ಯಾಂಡಿಂಗ್ ವೇಳೆ ಪಕ್ಕದಲ್ಲೇ ಹೊತ್ತಿ ಉರಿದ ಬೆಂಕಿ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget