ಕ್ರೈಂವೈರಲ್ ನ್ಯೂಸ್

ಈ ಬ್ಯಾಂಕ್ ಅನ್ನು ಮುಚ್ಚಲು ನಿರ್ಧರಿಸಿದೆಯಾ RBI..! ಬ್ಯಾಂಕ್ ಮುಚ್ಚಲು ಕಾರಣವೇನು? ನೀವೂ ಈ ಬ್ಯಾಂಕ್ ಗ್ರಾಹಕರಾ? ಗ್ರಾಹಕರಿಗೆ ಎಷ್ಟು ಲಕ್ಷದ ವರೆಗೆ ಪರಿಹಾರ ನೀಡಲಿದೆ ಈ ಬ್ಯಾಂಕ್?

226

ನ್ಯೂಸ್ ನಾಟೌಟ್: ಭಾರತಿಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ ವೊಂದರ ಪರವಾನಗಿಯನ್ನು ರದ್ದುಗೊಳಿಸಿದ್ದು, ಯಾವುದು ಆ ಬ್ಯಾಂಕ್, ಆ ಬ್ಯಾಂಕ್ ಮುಚ್ಚಲು ಕಾರಣವೇನು? ಅಲ್ಲಿನ ಪ್ರಸ್ತುತ ಗ್ರಾಹಕರಿಗೆ ಪರಿಹಾರ ನೀಡಲಿದೆಯಾ? ಇಲ್ಲಿದೆ ಸಂಪೂರ್ಣ ಮಾಹಿತಿ. ಈ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಇದರಿಂದ ಸಮಸ್ಯೆ ಎದುರಾಗಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂಬೈನ ‘ದಿ ಕಪೋಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್’ ಪರವಾನಗಿಯನ್ನು ರದ್ದುಗೊಳಿಸಿದೆ ಎನ್ನಲಾಗಿದೆ.

ಬ್ಯಾಂಕ್‌ ನ ಬಳಿ ಯಾವುದೇ ರೀತಿಯ ಬಂಡವಾಳ ಇಲ್ಲ. ಇನ್ನು ಯಾವುದೇ ರೀತಿಯಿಂದ ಗಳಿಕೆ ಸಾಧ್ಯವೂ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿಕೊಂಡಿದೆ. ಈ ಕಾರಣದಿಂದಾಗಿ ಆರ್‌ಬಿಐ ಬ್ಯಾಂಕ್ ಮುಚ್ಚುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ವರದಿ ತಿಳಿಸಿದೆ.

ಪರವಾನಗಿ ರದ್ದತಿಯೊಂದಿಗೆ ಸಹಕಾರಿ ಬ್ಯಾಂಕ್ ಅನ್ನು ತಕ್ಷಣವೇ ಬ್ಯಾಂಕಿಂಗ್ ವ್ಯವಹಾರದಿಂದ ನಿಷೇಧಿಸಲಾಗಿದೆ ಎಂದು ಅರ್ ಬಿ ಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಈ ಬ್ಯಾಂಕ್ ನಲ್ಲಿ ಠೇವಣಿಗಳನ್ನು ಇರಿಸುವುದು ಅಥವಾ ಇಟ್ಟ ಠೇವಣಿಯನ್ನು ಹಿಂಪಡೆ ಯುವುದು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.

ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ನಿಂದ 5 ಲಕ್ಷ ರೂ.ವರೆಗಿನ ಠೇವಣಿ ವಿಮಾ ಕ್ಲೈಮ್ ಮೊತ್ತವನ್ನು ಪಡೆಯಲು ಪ್ರತಿಯೊಬ್ಬ ಠೇವಣಿದಾರರು ಅರ್ಹರಾಗಿರುತ್ತಾರೆ ಎಂದು ರಿಸರ್ವ್ ಬ್ಯಾಂಕ್ ಹೇಳಿದ್ದು, ಈ ರೀತಿಯಾಗಿ, ಬ್ಯಾಂಕಿನ ಸುಮಾರು 96.09 ಪ್ರತಿಶತ ಠೇವಣಿದಾರರು ತಮ್ಮ ಸಂಪೂರ್ಣ ಠೇವಣಿ ಮೊತ್ತವನ್ನು ಡಿಐಸಿಜಿಸಿಯಿಂದ ಪಡೆಯಲು ಅರ್ಹರಾಗಿರುತ್ತಾರೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಇದರ ಜೊತೆ, ಅಹಮದಾಬಾದ್ ಮೂಲದ ಕಲರ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್‌ನ ಹದಗೆಡುತ್ತಿರುವ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಇದರಲ್ಲಿ ಗ್ರಾಹಕರಿಗೆ ಕೇವಲ 50,000 ರೂ. ಮಾತ್ರ ಖಾತೆಯಿಂದ ತೆಗೆಯಲು ಅನುಮತಿ ನೀಡಲಾಗಿದೆ.

See also  ಮರ್ಕಂಜ ಬಸ್- ಓಮ್ನಿ ನಡುವೆ ಅಪಘಾತ, ಓಮ್ನಿ ಜಖಂ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget